2nd puc result 2025 Live: ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ.! ರಿಸಲ್ಟ್ ಚೆಕ್ ಮಾಡಲು ಬೇಕಾಗುವ ಡರ್ಟ್ ಲಿಂಕ್ ಇಲ್ಲಿದೆ, @karresults.nic.in
ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಇವತ್ತು ಅಂದರೆ ದಿನಾಂಕ 08 ಏಪ್ರಿಲ್ 2025 ಮಂಗಳವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಬಿಡುಗಡೆ ಮಾಡಲಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಪರೀಕ್ಷೆಯ ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡುವುದು ಹಾಗೂ ಪರೀಕ್ಷೆಯ ಫಲಿತಾಂಶ ಚೆಕ್ ಮಾಡಲು ಬೇಕಾಗುವ ಪ್ರಮುಖ ಲಿಂಕ್ ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ಮಾಹಿತಿ ತಿಳಿಯೋಣ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ (2nd puc result 2025 Live).?
ಹೌದು ಸ್ನೇಹಿತರೆ ಇವತ್ತು ಅಂದರೆ ಮಂಗಳವಾರ ದಿನಾಂಕ 8 ಏಪ್ರಿಲ್ 2025 ರಂದು ನಮ್ಮ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರು ಮಧು ಬಂಗಾರಪ್ಪನವರು ಮಧ್ಯಾಹ್ನ 12:30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಕಚೇರಿಯಲ್ಲಿ ಪ್ರಕಟಣೆ ಮಾಡಲಿದ್ದಾರೆ ಮತ್ತು ದ್ವಿತೀಯ ಪಿಯುಸಿ ಅಥವಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವನ್ನು ಮಧ್ಯಾಹ್ನ 1:30 ನಿಮಿಷಕ್ಕೆ ಅಧಿಕೃತ ವೆಬ್ಸೈಟ್ ಮೂಲಕ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಬಹುದು

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ 2024-25ನೇ ಸಾಲಿನ ಪದವಿ ಪೂರ್ವ ಪರೀಕ್ಷೆಗಳನ್ನು ಮಾರ್ಚ್ 01-20ನೇ ತಾರೀಖಿನವರೆಗೆ ಸುಮಾರು 1,172 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯದಾದ್ಯಂತ ಪರೀಕ್ಷೆ ನಡೆಸಲಾಯಿತು ಹಾಗೂ ಈ ಒಂದು ಪರೀಕ್ಷೆಯಲ್ಲಿ 7.13 ಲಕ್ಷ ವಿದ್ಯಾರ್ಥಿಗಳು ಹಾಜರಿದ್ದಾರೆ ಹಾಗೂ ಈ ಪರೀಕ್ಷೆಯಲ್ಲಿ ಯಾವುದೇ ರೀತಿ ನಕಲು ಅಥವಾ ಅಕ್ರಮ ನಡೆಯದಂತೆ ಸುಧಾರಿತ ಆಧುನಿಕ ತಂತ್ರಜ್ಞಾನ AI ಒಳಗೊಂಡ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಯಿತು ಇದರ ಜೊತೆಗೆ ವೆಬ್ ಕ್ಯಾಸ್ಟಿಂಗ್ ಸೌಲಭ್ಯವು ಕೂಡ ಮಾಡಲಾಗಿದೆ
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಸಿಗುತ್ತೆ, ಇಲ್ಲಿದೆ ನೋಡಿ ವಿವರ
ಹಾಗಾಗಿ ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶ ಚೆಕ್ ಮಾಡಲು ಬಯಸುತ್ತಿದ್ದಾರೆ ಹಾಗಾಗಿ ವಿದ್ಯಾರ್ಥಿಗಳು 8 ಏಪ್ರಿಲ್ 2025 ರಂದು ಮಧ್ಯಾಹ್ನ 1:30 ನಿಮಿಷಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ https://karresults.nic.in/ ಭೇಟಿ ನೀಡಿ ಫಲಿತಾಂಶವನ್ನು ಚೆಕ್ ಮಾಡಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd puc result 2025 Live) ಯಾವ ರೀತಿ ಚೆಕ್ ಮಾಡಬೇಕು..?
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಲು ಬಯಸುವ ವಿದ್ಯಾರ್ಥಿಗಳು ಮೊದಲು ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅಥವಾ ಪರೀಕ್ಷೆಯ ಫಲಿತಾಂಶ ಚೆಕ್ ಮಾಡಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ
ರಿಸಲ್ಟ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಚೆಕ್ ಮಾಡುವ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು
- ನಂತರ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಹಾಗೂ ಇತರ ವಿವರಗಳನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು
- ನಂತರ ವಿದ್ಯಾರ್ಥಿಗಳಿಗೆ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ವಿದ್ಯಾರ್ಥಿಯ ಫಲಿತಾಂಶ ನೋಡಲು ಸಿಗುತ್ತದೆ
- ನಂತರ ವಿದ್ಯಾರ್ಥಿಗಳು ಆ ಫಲಿತಾಂಶವನ್ನು ನೇರವಾಗಿ ತಮ್ಮ ಮೊಬೈಲ್ ಗೆ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನಿಮಗೆ ಪ್ರತಿದಿನ ಹೊಸ ಮಾಹಿತಿ ಪಡೆದುಕೊಳ್ಳಲು ಅಭ್ಯಾಸ ಇದೆಯಾ ಹಾಗಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ ಇದರಿಂದ ಹೊಸ ಹೊಸ ಮಾಹಿತಿಗಳು ಬೇಗ ಬೇಗ ಸಿಗುತ್ತವೆ