bharat bandh: ನಾಳೆ ಸಂಪೂರ್ಣ ‘ಭಾರತ್ ಬಂದ್’ ಹಾಗಿದ್ದರೆ ನಾಳೆ ಏನಿರುತ್ತೆ ಏನಿರಲ್ಲ, ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ನಾಳೆ ಅಂದರೆ ಜುಲೈ 9 2025 ರಂದು ದೇಶದಾದ್ಯಾಂತ “ಭಾರತ ಬಂದ್” ಕರೆ ನೀಡಲಾಗಿದೆ, ದೇಶದಲ್ಲಿ ಪ್ರಮುಖ 10 ಕೇಂದ್ರ ಕಾರ್ಮಿಕ ಸಂಘ ಸಂಸ್ಥೆಗಳು ಈ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಸುಮಾರು 25 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗೂ ಈ ಒಂದು ಭಾರತ್ ಬಂದ್ ಕರೆಗೆ ಮುಖ್ಯ ಕಾರಣ ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತರ ವಿರೋಧಿ ನೀತಿಗಳ ವಿರುದ್ಧ ನಡೆಯುವ ಹೋರಾಟ ಎಂದು ತಿಳಿದು ಬಂದಿದೆ ಹಾಗಾಗಿ ನಾವು ಈ ಲೇಖನೆಯ ಮೂಲಕ “ಭಾರತ್ ಬಂದ್” ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
IMD ಹೊಸ ರಿಪೋರ್ಟ್ ಮುಂದಿನ ಐದು ದಿನಗಳವರೆಗೆ ಈ ಜಿಲ್ಲೆಗಳಲ್ಲಿ
“ಭಾರತ್ ಬಂದ್” ಪರಿಣಾಮ ಯಾವ ಸೇವೆಗಳು ಸ್ಥಗಿತಗೊಳ್ಳಬಹುದು.?
ನಾಳೆ ಅಂದರೆ 9 ಜುಲೈ 2025 ರಂದು ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಸೇವೆಗಳು ಹಾಗೂ ಸಾರಿಗೆ ಮತ್ತು ಅಂಚೆ ಇಲಾಖೆಯ ಸೇವೆಗಳು ಮತ್ತು ಕಲ್ಲಿದ್ದಲು ಹಾಗೂ ಗಣಿಗಾರಿಕೆ ಮತ್ತು ಇತರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಗಂಭೀರ ಪರಿಣಾಮ ಬೀರಬಹುದು ಹಾಗಾಗಿ ನಾವು ಕೆಳಗಡೆ ಹೆಚ್ಚಿನ ಮಾಹಿತಿ ತಿಳಿಸಿದ್ದೇವೆ

ಬ್ಯಾಂಕಿಂಗ್ ಸೇವೆಗಳು:- ಭಾರತ್ ಬಂದ್ ಕಾರಣ ಬ್ಯಾಂಕಿಂಗ್ ಸಂಬಂಧಿಸಿದ ಸೇವೆಗಳು ಅಂದರೆ ಹಣ ಠೇವಣಿ ಮಾಡುವುದು ಹಾಗೂ ಚೆಕ್ ಕ್ಲಿಯರೆನ್ಸ್ ಸೇವೆಗಳು ಹಾಗೂ ಬ್ಯಾಂಕಿನಲ್ಲಿ ಹಣಕಾಸು ವ್ಯವಹಾರಗಳು ಸ್ಥಗಿತಗೊಳ್ಳಬಹುದು
ಅಂಚೆ ಕಚೇರಿ ಸೇವೆಗಳು ಮತ್ತು ಗಣಿಗಾರಿಕೆ ಹಾಗೂ ಕಲ್ಲಿದ್ದಲು ಮುಂತಾದ ಕ್ಷೇತ್ರಗಳಲ್ಲಿ ಕಾರ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ
ಸಾರಿಗೆ ಸೇವೆಗಳು:– ಭಾರತ್ ಬಂದ್ ಕಾರಣ ಸಾರಿಗೆ ಸೇವೆಗಳು ಅಂದರೆ ಆಟೋ ಮತ್ತು ಬಸ್ ಸಂಚಾರ ಜನರಿಗೆ ಸೀಮಿತವಾಗಿ ಸಿಗಬಹುದು
ಕಾರ್ಖಾನೆ ಮತ್ತು ಶಿಕ್ಷಣ ಸಂಸ್ಥೆಗಳು:- ಭಾರತ್ ಬಂದ್ ಹೋರಾಟದ ಕಾರಣದಿಂದ ಕೆಲವೊಂದು ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಖಾನೆಗಳ ಸೇವೆಗಳಲ್ಲಿ ತೊಡಗಿಕೊಂಡ ಉದ್ಯೋಗಿಗಳು ಕೆಲಸಕ್ಕೆ ಹೋಗದೆ ಇರಬಹುದು ಅಥವಾ ತೊಂದರೆ ಉಂಟಾಗಬಹುದು
ಭಾರತ್ ಬಂದ್ ಕಾರಣದಿಂದ ಜನರಿಗೆ ಸಾಮಾನ್ಯವಾಗಿ ದೊರೆಯುವಂತೆ ಸೇವೆಗಳು..?
ರೈಲು ಮತ್ತು ವಿಮಾನ ಸೇವೆಗಳು:– ಪ್ರತಿದಿನದಂತೆ ರೈಲು ಮತ್ತು ವಿಮಾನ ಸೇವೆಗಳು ಕಾರ್ಯನಿರ್ವಹಿಸಬಹುದು
ಆರೋಗ್ಯ ಸೇವೆಗಳು:- ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳು ಅಂದರೆ ಆಸ್ಪತ್ರೆ ಹಾಗೂ ಔಷಧಿ ಮತ್ತು ಇತರ ತುರ್ತು ಸೇವೆಗಳು ಪ್ರತಿದಿನದಂತೆ ಯಾವುದೇ ಅಡಚಣೆ ಇಲ್ಲದೆ ಕಾರ್ಯನಿರ್ವಹಿಸಲಿದ್ದಾರೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು:- ಪ್ರತಿದಿನದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಅಂದರೆ ಫೋನ್ ಪೇ, ಗೂಗಲ್ ಪೇ, ನೆಟ್ ಬ್ಯಾಂಕಿಂಗ್, UPI ಗೆ ಸಂಬಂಧಿಸಿದ ಸೇವೆಗಳು ಯಥಾಪ್ರಕಾರ ಕಾರ್ಯ ನಿರ್ವಹಿಸಲಿದ್ದಾರೆ
ಭಾರತ್ ಬಂದ್ ಪ್ರಮುಖ ಕಾರ್ಮಿಕರ ಬೇಡಿಕೆಗಳು..?
ಕೆಲಸದ ಸಮಯ ಹೆಚ್ಚಳ ವಿರೋಧ:- ಇತ್ತೀಚಿಗೆ ಕಾರ್ಮಿಕರ ಕೆಲಸದ ಸಮಯವನ್ನು ಹೆಚ್ಚು ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಿರ್ಧಾರ ಮಾಡಿವೆ ಹಾಗಾಗಿ ಈ ನಿಯಮಗಳು ತೆಗೆಯಲು ಒತ್ತಾಯ
ಗುತ್ತಿಗೆಯ ನೇಮಕಾತಿ ವಿರೋಧಿ:- ಕಾರ್ಮಿಕರನ್ನು ಗುತ್ತಿಗೆಯ ನೇಮಕಾತಿ ಮಾಡಿಕೊಳ್ಳುವುದು ತೆಗೆಯಬೇಕು ಹಾಗೂ ಕಾರ್ಮಿಕರಿಗೆ ಕೆಲಸದ ಭದ್ರತೆ ನೀಡಬೇಕು
ಕಾರ್ಮಿಕ ಸಂಹಿತೆಗಳ ರದ್ದತಿ:- ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವಂತಹ ಕಾನೂನುಗಳು ಹಾಗೂ ಕಾಯ್ದೆಗಳನ್ನು ತೆಗೆದು ಹಾಕಬೇಕು
ಕಾರ್ಪೊರೇಟ್ ನೀತಿಗಳು ರದ್ದತಿ: ಕಾರ್ಪೊರೇಟ್ ಸಂಸ್ಥೆಗಳಿಗೆ ಆದ್ಯತೆ ನೀಡುವ ನೀತಿಗಳನ್ನು ವಿರೋಧಿಸಲಾಗುತ್ತಿದೆ
ನೆರೆಗಾ ಕೆಲಸದ ದಿನ ಹೆಚ್ಚಳ:- ನೆರೆಗದ ಅಡಿಯಲ್ಲಿ ನೀಡುತ್ತಿರುವ ಕೆಲಸದ ದಿನವನ್ನು ಹೆಚ್ಚಳ ಮಾಡಲು ಆಗ್ರಹ
ಸ್ನೇಹಿತರೆ ನಿಮಗೆ ಇದೇ ರೀತಿ ಸರಕಾರಿ ಯೋಜನೆಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ದೇಶದ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಬಹುದು