New Ration Card Application – ಹೊಸ Ration ಕಾರ್ಡ್ ಅರ್ಜಿ ಪ್ರಾರಂಭ.! ರೇಷನ್ ಕಾರ್ಡ್ ತಿದ್ದುಪಡಿ ಆರಂಭ, ಇಲ್ಲಿದೆ ಮಾಹಿತಿ
ನಮಸ್ಕಾರ ಸ್ನೇಹಿತರೆ ಇದೀಗ ಹೊಸದಾಗಿ (Ration) ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಲು (Apply online Karnataka) ಕಾಯುತ್ತಿರುವವರಿಗೆ ಹಾಗೂ ರೇಷನ್ ಕಾರ್ಡ್ ನಲ್ಲಿ ಹೊಸ ಕುಟುಂಬದ ಸದಸ್ಯರು ಸೇರ್ಪಡೆ ಮಾಡಲು ಬಯಸುವವರಿಗೆ ಮತ್ತು ರೇಷನ್ (Ration Card) ಕಾರ್ಡಿಗೆ ಸಂಬಂಧಿಸಿದ ತಿದ್ದುಪಡಿ ಮಾಡಲು ಬಯಸುವಂಥವರಿಗೆ ಇದೀಗ ಸಿಹಿ ಸುದ್ದಿ.! ಹೌದು ಸ್ನೇಹಿತರೆ ರೇಷನ್ (Ration Card) ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ (corruption) ಪ್ರಾರಂಭವಾಗಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿದುಕೊಳ್ಳೋಣ..
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ…?
ಹೌದು ಸ್ನೇಹಿತರೆ, ಹೊಸ ಪಡಿತರ ಚೀಟಿ ಅಥವಾ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಲು ಬಯಸುವಂಥವರಿಗೆ ಇದೀಗ ಅವಕಾಶ ಮಾಡಿಕೊಡಲಾಗಿದೆ..! ಹೌದು ಸ್ನೇಹಿತರೆ ನಿಮ್ಮ ಹತ್ತಿರ ಈ ಶ್ರಮ ಕಾರ್ಡ್ ಇದ್ದರೆ ನೀವು ಇದೀಗ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಬಹುದು.!

ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಇದ್ದವರಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದ್ದು ಆಸಕ್ತಿ ಇರುವವರು ದಿನಾಂಕ 31 ಜುಲೈ 2025 ರ ಒಳಗಡೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅರ್ಜಿದಾರರು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ (New Ration Card Application).?
ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೊಸ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಲು ಬಯಸುತ್ತಿದ್ದೀರಾ ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವ ಕುಟುಂಬದ ಸದಸ್ಯರನ್ನು ತೆಗೆದುಹಾಕಲು ಬಯಸುತ್ತಿದ್ದೀರಾ ಹಾಗಾದ್ರೆ ಇದೀಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅರ್ಜಿ ಪ್ರಾರಂಭವಾಗಿದೆ..
ಹೌದು ಸ್ನೇಹಿತರೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಅಂದರೆ ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವುದು ಅಥವಾ ಕುಟುಂಬದ ಮುಖ್ಯಸ್ಥರ ಬದಲಾವಣೆ ಅಥವಾ ರೇಷನ್ ಕಾರ್ಡ್ ನ ವಿಳಾಸದ ಬದಲಾವಣೆ ಮತ್ತು ಇತರ ರೇಷನ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಸರಿಪಡಿಸಲು ಇದೀಗ ಅವಕಾಶ ಮಾಡಿಕೊಡಲಾಗಿದೆ
ಆದರಿಂದ ತಿದ್ದುಪಡಿ ಮಾಡಲು ಬಯಸುವ ಕುಟುಂಬದವರು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಪಡಿತರ ಚೀಟಿಯಲ್ಲಿ ಯಾವುದೇ ತಿದ್ದುಪಡಿ ಮಾಡಿಸಲು ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
- ಈ ಶ್ರಮ್ ಕಾರ್ಡ್ (ಹೊಸ ರೇಷನ್ ಕಾರ್ಡ್)
- ರೇಷನ್ ಕಾರ್ಡ್ (ತಿದ್ದುಪಡಿ ಮಾಡಲು)
- ಮೊಬೈಲ್ ನಂಬರ್
- ಇತರೆ ಅಗತ್ಯ ದಾಖಲಾತಿಗಳು
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸರಕಾರದ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪ್ರತಿದಿನ ಪಡೆಯಲು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು