IB Security Assistant 2025 – SSLC ಪಾಸಾದವರಿಗೆ ಸರ್ಕಾರಿ ಕೆಲಸ.! ಬೆಂಗಳೂರು ಗುಪ್ತಚರ ಇಲಾಖೆಯ 204 ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ನಮಸ್ಕಾರ ಸ್ನೇಹಿತರೆ ನಿಮಗೆ ಸರಕಾರಿ ಕೆಲಸ ಮಾಡಲು ಆಸಕ್ತಿ ಇದೆಯಾ ಹಾಗಾದರೆ ನಿಮಗೆ ಗುಪ್ತಚರ ಇಲಾಖೆಯ ವತಿಯಿಂದ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಹತ್ತನೇ ತರಗತಿ ಪಾಸಾದಂತವರಿಗೆ ಕೇಂದ್ರ ಗುಪ್ತಚರ ಇಲಾಖೆ ವತಿಯಿಂದ ಉದ್ಯೋಗ ಸಿಗುತ್ತೆ. ಹಾಗಾಗಿ ಆಸಕ್ತಿ ಇರುವವರು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಿ..
ನಾವು ಈ ಒಂದು ಲೇಖನ ಮೂಲಕ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಆದಷ್ಟು ಕೊನೆಯವರೆಗೂ ಓದಿ
ಗುಪ್ತಚರ ಇಲಾಖೆ ಹೊಸ ನೇಮಕಾತಿ 2025..?
ಹೌದು ಸ್ನೇಹಿತರೆ ಕೇಂದ್ರ ಗುಪ್ತಚರ ಇಲಾಖೆ (intelligence bureau India) ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತೆ ಭದ್ರತಾ ಸಹಾಯಕ (security assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ..! ಈ ಅಧಿಸೂಚನೆ ಪ್ರಕಾರ ಒಟ್ಟು 4987 ಹುದ್ದೆಗಳು ಖಾಲಿ ಇವೆ ಹಾಗೂ ಬೆಂಗಳೂರಿನಲ್ಲಿ ೨೦೪ ಹುದ್ದೆಗಳು ಖಾಲಿ ಇವೆ ಆದ್ದರಿಂದ ಆಸಕ್ತಿ ಇರುವವರು ಬೇಗ ಅರ್ಜಿ ಸಲ್ಲಿಕೆ ಮಾಡಬಹುದು

ಹೌದು ಸ್ನೇಹಿತರೆ ನಿಮಗೆ ಕನ್ನಡ ಭಾಷೆ ಓದಲು ಹಾಗೂ ಬರೆಯಲು ಮತ್ತು ಮಾತನಾಡಲು ಬಂದರೆ ಸಾಕು ಹಾಗೂ 10ನೇ ತರಗತಿ ಪಾಸಾದರೆ ಸಾಕು ಈ ಹುದ್ದೆಗಳಿಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಆದ್ದರಿಂದ ಇನ್ನಷ್ಟು ಹೆಚ್ಚಿನ ವಿವರವನ್ನು ಈಗ ತಿಳಿದುಕೊಳ್ಳೋಣ
ಹುದ್ದೆಗಳ ನೇಮಕಾತಿ ವಿವರ (IB Security Assistant 2025)..?
ನೇಮಕಾತಿ ಸಂಸ್ಥೆ:- ಕೇಂದ್ರ ಗುಪ್ತಚರ ಇಲಾಖೆ (IB)
ಖಾಲಿ ಹುದ್ದೆಗಳ ಸಂಖ್ಯೆ:- 4987 ಹುದ್ದೆಗಳು
ಬೆಂಗಳೂರು:- 204 ಖಾಲಿ ಹುದ್ದೆಗಳು
ಶೈಕ್ಷಣಿಕ ಅರ್ಹತೆ:- SSLC
ಅರ್ಜಿ ಪ್ರಾರಂಭ ದಿನಾಂಕ:- 20/07/2025
ಅರ್ಜಿ ಕೊನೆಯ ದಿನಾಂಕ:- 17/08/2025
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ವೇತನ ಎಷ್ಟು:- ₹21,700-₹69,100
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಇರುವ ಅರ್ಹತೆ ಮಾನದಂಡಗಳು..?
ಶೈಕ್ಷಣಿಕ ಅರ್ಹತೆ:- ಕೇಂದ್ರ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಪಾಸಾದರೆ ಸಾಕು ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಬೆಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕಡ್ಡಾಯವಾಗಿ ಸ್ಥಳೀಯ ಭಾಷೆ ಕನ್ನಡದಲ್ಲಿ ಓದಲು ಬರೆಯಲು ಹಾಗೂ ಮಾತನಾಡಲು ಬರುತ್ತಿರಬೇಕು
ವಯೋಮಿತಿ ಎಷ್ಟು:- ಕೇಂದ್ರ ಗುಪ್ತಚರ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ನಿಗದಿ ಮಾಡಲಾಗಿದೆ ಮತ್ತು ಮೀಸಲಾತಿ ಆಧಾರದ ಮೇಲೆ ಒಬಿಸಿ ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಲಿಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 05 ವರ್ಷ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ
ಆಯ್ಕೆ ವಿಧಾನ:- ಗುಪ್ತಚರ ಇಲಾಖೆಯ ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ನಂತರ ಸ್ಥಳೀಯ ಭಾಷೆಯ ಪ್ರಾವಿಣ್ಯತೆ ಹಾಗೂ ಸಂದರ್ಶನ ಮುಂತಾದ ವಿಧಾನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕೊನೆಯ ದಿನಾಂಕದ ಒಳಗಡೆ ಕೆಳಗಡೆ ನೀಡಿರುವ https://www.mha.gov.in/en ಲಿಂಕಿನ ಮೇಲೆ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ನಂತರ ಅಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ನಂತರ ನೀವು ಭರ್ತಿ ಮಾಡಿದ ಎಲ್ಲ ಮಾಹಿತಿಗಳು ಸರಿಯಾಗಿ ಇದೆ ಎಂದು ಪರಿಶೀಲನೆ ಮಾಡಿ
- ನಂತರ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಜಿ ಶುಲ್ಕ ಅಂದರೆ ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ₹500/- & SC/ST/ಮಹಿಳಾ ಅಭ್ಯರ್ಥಿಗಳಿಗೆ ₹50/- ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ
- ನಂತರ ಎಲ್ಲಾ ಮಾಹಿತಿ ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು
ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು