RRB Recruitment 2025 – Apply Online for 30307 (RRB NTPC Bharti 2025)

RRB Recruitment 2025- ನಮಸ್ಕಾರ ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆ ಇದೀಗ ಆರ್ ಆರ್ ಬಿ ಅಡಿಯಲ್ಲಿ ವಿವಿಧ 30,307 ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ಆಸಕ್ತಿ ಇರುವಂತಹ ಅರ್ಜಿದಾರರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಹೌದು ಸ್ನೇಹಿತರೆ ನಾವು ಈ ಒಂದು ಲೇಖನೆಯ ಮೂಲಕ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಪಡೆದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗು ಓದಿ

 

WhatsApp Group Join Now
Telegram Group Join Now       

ರೈಲ್ವೆ ಮಂಡಳಿ ಹೊಸ ನೇಮಕಾತಿ (RRB Recruitment 2025)..?

ಹೌದು ಸ್ನೇಹಿತರೆ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ಸುಮಾರು 30,307 Non-Technical Popular Categories (NTPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ ಹುದ್ದೆಗಳ ಅನುಗುಣವಾಗಿ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಮತ್ತು ಡಿಪ್ಲೋಮೋ ಮತ್ತು ಪದವಿ ಹಾಗೂ ಇತರ ವಿದ್ಯಾರ್ಥಿ ಹೊಂದಿದವರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು

RRB Recruitment 2025
RRB Recruitment 2025

 

ಆದ್ದರಿಂದ ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ, ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿ.! ಆದ್ದರಿಂದ ನಾವು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ

 

ಹುದ್ದೆಗಳ ನೇಮಕಾತಿ ವಿವರ (RRB Recruitment 2025)..?

ನೇಮಕಾತಿ ಸಂಸ್ಥೆ:- ಭಾರತೀಯ ರೈಲ್ವೆ ಇಲಾಖೆ

ಖಾಲಿ ಹುದ್ದೆಗಳ ಸಂಖ್ಯೆ:- 30,307 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ

WhatsApp Group Join Now
Telegram Group Join Now       

ಅರ್ಜಿ ಪ್ರಾರಂಭ ದಿನಾಂಕ:- 30 ಆಗಸ್ಟ್ 2025

ಅರ್ಜಿ ಕೊನೆಯ ದಿನಾಂಕ:- 29 ಸೆಪ್ಟೆಂಬರ್ 2025

ಖಾಲಿ ಹುದ್ದೆಗಳ ವಿವರ:- 

1) ಮುಖ್ಯ ವಾಣಿಜ್ಯ/ಟಿಕೆಟ್ ಮೇಲ್ವಿಚಾರಕರ:- 6,235 ಹುದ್ದೆಗಳು

2) ಸ್ಟೇಷನ್ ಮಾಸ್ಟರ್:- 3,562 ಹುದ್ದೆಗಳು

3) ಟೈಪಿಸ್ಟ್ ಮತ್ತು ಜೂನಿಯರ್ ಅಕೌಂಟ್ ಅಸಿಸ್ಟೆಂಟ್:- 7,520 ಹುದ್ದೆಗಳು

4) ಸೀನಿಯರ್ ಕ್ಲಾರ್ಕ್ & ಟೈಪಿಸ್ಟ್ ಹುದ್ದೆಗಳು:- 7,367 ಹುದ್ದೆಗಳು

 

ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ವಿವರ…?

ವಿದ್ಯಾರ್ಹತೆ:- ಭಾರತೀಯ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಈ 30,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಹುದ್ದೆಗಳ ಅನುಗುಣವಾಗಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಮತ್ತು ಡಿಪ್ಲೋಮೋ, ಇಂಜಿನಿಯರಿಂಗ್, ಪದವಿ ಮತ್ತು ಇತರ ವಿದ್ಯಾರ್ಥಿ ಹೊಂದಿದವರು ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ವಿವರಕ್ಕಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ

ವಯೋಮಿತಿ ಎಷ್ಟು:- ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಬಿಡುಗಡೆ ಮಾಡಿರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷ ನಿಗದಿ ಮಾಡಲಾಗಿದೆ ಮತ್ತು ಸರಕಾರದ ಮೀಸಲಾತಿ ನೇಮಗಳ ಅನುಸಾರವಾಗಿ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ

ಸಂಬಳ ಎಷ್ಟು:- ಈ 30,000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ತಿಂಗಳಿಗೆ ₹21000 ಇಂದ ಗರಿಷ್ಠ ₹69,700/- ಹೊರಗೆ ಸಂಬಳ ನೀಡಲಾಗುತ್ತದೆ

ಆಯ್ಕೆಯ ವಿಧಾನ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ನಂತರ ಸಂದರ್ಶನ ಹಾಗೂ ಇತರ ವಿಧಾನಗಳನ್ನು ಆಧರಿಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ

 

ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಈ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ನೀವು ರೈಲ್ವೆ ನೇಮಕಾತಿ ಮಂಡಳಿ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಈ ಹುದ್ದೆಗಳಿಗೆ ಕೊನೆಯ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಇದೇ ರೀತಿ ನಿಮಗೆ ಪ್ರತಿದಿನ ಸರ್ಕಾರಿ ಉದ್ಯೋಗ ಹಾಗೂ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ತಕ್ಷಣ

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ

IB Security Assistant 2025: Apply online for 4987 posts | SSLC ಪಾಸಾದವರಿಗೆ ಸರ್ಕಾರಿ ಕೆಲಸ.! ಈ ರೀತಿ ಅಪ್ಲೈ ಮಾಡಿ

Leave a Comment