vidyasiri scholarship apply online 2025:- ವಿದ್ಯಾರ್ಥಿಗಳಿಗೆ ಸಿಗಲಿದೆ 15000 ಹಣ.! ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಶಿಕ್ಷಣ ಮುಂದುವರಿಸಲು ವಾರ್ಷಿಕ 15,000 ನೀಡುವ ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಒಂದು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಸಂಪೂರ್ಣ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆ..?
ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಯನ್ನು ನಮ್ಮ (government) ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿದೆ.! ಈ ಸ್ಕಾಲರ್ಶಿಪ್ (scholarship) ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಅಂದರೆ ಹಿಂದುಳಿದ ವರ್ಗದ (BC) ಮತ್ತು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ಹಾಗೂ ಅಲೆಮಾರಿ ಮತ್ತು ಅಲೆ ಅಲೆಮಾರಿ ವರ್ಗಕ್ಕೆ ಸೇರಿದ (Student) ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವುದು.!

ಇದರ ಜೊತೆಗೆ ಕಾಲೇಜು ಅರ್ಜಿ ಶುಲ್ಕ ಮತ್ತು ವಸತಿ ಹಾಗೂ ಆಹಾರ ಮತ್ತು ಇತರ ಖರ್ಚು ವೆಚ್ಚಗಳ ಸರಿದೂಗಿಸಲು ಸರಕಾರ ಕಡೆಯಿಂದ ಆರ್ಥಿಕ ನೆರವು ನೀಡಲಾಗುತ್ತದೆ
ಹೌದು ಸ್ನೇಹಿತರೆ, ಈ ವಿದ್ಯಾಸಿರಿ (vidyasiri) ಸ್ಕಾಲರ್ಶಿಪ್ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ವಾರ್ಷಿಕ (yearly) 15,000 ಅಂದರೆ ತಿಂಗಳಿಗೆ (monthly) 1,500 ವರೆಗೆ ಈ ಒಂದು ವಿದ್ಯಾಸಿರಿ ಸ್ಕಾಲರ್ಶಿಪ್ (vidyasiri scholarship) ಯೋಜನೆಯ ಮೂಲಕ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು..
ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳು 30 ಸೆಪ್ಟೆಂಬರ್ 2025 ರ ಒಳಗಡೆ ಈ ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು..?
ಸ್ನೇಹಿತರೆ ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಪ್ರಸ್ತುತ ವರ್ಷದಲ್ಲಿ ಪಿಯುಸಿ ಹಾಗೂ ಡಿಪ್ಲೋಮೋ ಮತ್ತು ಡಿಗ್ರಿ ಅಥವಾ ಪದವಿ ಮತ್ತು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಮತ್ತು ಇತರ ಯಾವುದೇ ಕೋರ್ಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಬಯಸುವ ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದ ಹಾಗೂ ಅಲೆಮಾರಿ ಮತ್ತು ಅರೆ ಅಲೆಮಾರಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕ್ಕೆ ಸೇರಿರಬೇಕು ಅಂತ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ವಿದ್ಯಾರ್ಥಿಗಳು ಕರ್ನಾಟಕದ ಮೂಲ ನಿವಾಸಿಗಳಾಗಿರಬೇಕು
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು
- ವಿದ್ಯಾರ್ಥಿಗಳು ಇಂದಿನ ವರ್ಷದಲ್ಲಿ ಸಾಮಾನ್ಯ ಹಿಂದುಳಿದ ವರ್ಗಕ್ಕೆ ಸೇರಿದರೆ ಕನಿಷ್ಠ 60% ಅಂಕಪಡೆ ತರಬೇಕು ಮತ್ತು ST/SC ವರ್ಗದ ವಿದ್ಯಾರ್ಥಿಗಳು ಕನಿಷ್ಠ 55% ಅಂಕ ಪಡೆದಿರಬೇಕು
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿರಬೇಕು
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು (Apply online) ಬಯಸುವ ವಿದ್ಯಾರ್ಥಿಗಳು ಕಾಲೇಜು ಮತ್ತು ನಿವಾಸದ ನಡುವಿನ (distance) ದೂರ ಕನಿಷ್ಠ 5 ಕಿ.ಮೀ ಗಿಂತ ಹೆಚ್ಚು ಇರಬೇಕು
- ಸರಕಾರಿ ಹಾಸ್ಟೆಲಿಗೆ ಸೇರಿದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮಾತ್ರ ಅರ್ಹತೆ ಹೊಂದಿರುತ್ತಾರೆ
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬಯಸಿದರೆ ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಅದನ್ನು ಬಳಸಿಕೊಂಡು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರ ಮೇಲೆ ಕೊಟ್ಟಿರುವ ಲಿಂಕೆನ ಮೇಲೆ ಕ್ಲಿಕ್ ಮಾಡಿ ಅಥವಾ http://ssp.postmatric.karnataka.gov.in/ ಇದರ ಮೇಲೆ ಕ್ಲಿಕ್ ಮಾಡಿ
ನಂತರ ಹೊಸ ರೆಜಿಸ್ಟ್ರೇಷನ್ ಮಾಡಿಕೊಳ್ಳಿ ಅಥವಾ ನೀವು ಈಗಾಗಲೇ ರಿಜಿಸ್ಟ್ರೇಷನ್ ಮಾಡಿದರೆ ಲಾಗಿನ್ ಮಾಡಿ
ನಂತರ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಮುಂತಾದ ವಿಳಾಸಗಳನ್ನು ನಮೂದಿಸಿ ಲಾಗಿನ್ ಮಾಡಬಹುದು ಅಥವಾ ರಿಜಿಸ್ಟ್ರೇಷನ್ ಮಾಡಬಹುದು
ನಂತರ ನೀವು ಅಲ್ಲಿ ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ ಆಯ್ಕೆ ಮಾಡಿಕೊಳ್ಳಿ
ನಂತರ ವಿದ್ಯಾರ್ಥಿಗಳ ವಯಕ್ತಿಕ ಮಾಹಿತಿ ಹಾಗೂ ಕುಟುಂಬದ ಆದಾಯ ಮತ್ತು ಇತರ ವಿವರಗಳನ್ನು ನಮೂದಿಸಬೇಕು
ನಂತರ ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಮಾರ್ಕ್ಸ್ ಕಾರ್ಡ್ ಮತ್ತು ಪಾಸ್ ಬುಕ್ ಇತರ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
ನಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಪೂರ್ಣವಾದ ನಂತರ ರಶೀದಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ ಅಥವಾ ಡೌನ್ಲೋಡ್ ಮಾಡಿಕೊಳ್ಳಿ
ನಂತರ ಈ ಒಂದು ಪ್ರಿಂಟೌಟ್ ತೆಗೆದುಕೊಂಡು ಎಲ್ಲಾ ದಾಖಲಾತಿಗಳನ್ನು ಲಗತಿಸಿ ನಿಮ್ಮ ಕಾಲೇಜಿನಲ್ಲಿ ನೀಡಬೇಕು ನಂತರ ಅಧಿಕಾರಿಗಳು ಪರಿಶೀಲಿಸಿ, ಸಮಾಜ ಕಲ್ಯಾಣ ಇಲಾಖೆಗೆ ಕಳಿಸುತ್ತಾರೆ
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ:-
ದೂರವಾಣಿ ಸಂಖ್ಯೆ:- 1902 ಅಥವಾ 8050770004
ಅಧಿಕೃತ ವೆಬ್ಸೈಟ್:- http://ssp.postmatric.karnataka.gov.in/
Gmail:- postmatrichelp@karnataka.gov.in
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಪಡೆಯಲು
ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಬಹುದು