ಅನ್ನಭಾಗ್ಯ ಯೋಜನೆ: ಫಲಾನುಭವಿಗಳಿಗೆ ಇನ್ಮುಂದೆ ಅಕ್ಕಿಯ ಬದಲು ಬೇರೆ ಧಾನ್ಯ ವಿತರಣೆ.!
ನಮಸ್ಕಾರ ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಇದೀಗ ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿ ಇವೆ ಈ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯು ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ.!
ಹೌದು ಗೆಳೆಯರೇ ಅನ್ನ ಭಾಗ್ಯ ಯೋಜನೆ ಮೂಲಕ ಪ್ರಸ್ತುತ ರಾಜ್ಯದ ಜನರಿಗೆ ತಲಾ ಹತ್ತು ಕೆಜಿ ವಿತರಣೆ ಮಾಡಲಾಗುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಇದೀಗ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಲಾಗಿದೆ..!
ಅನ್ನಭಾಗ್ಯ ಯೋಜನೆಯ ವಿವರಗಳು (Anna bhagya Yojana).?
ಸ್ನೇಹಿತರ ನಮ್ಮ ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಸಲಾಯಿತು. ಈ ಒಂದು ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳು ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ ಹಲವಾರು ಭರವಸೆಗಳನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದವು.!

ಅದೇ ರೀತಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಪಂಚ ಗ್ಯಾರಂಟಿ ಅಥವಾ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಬರವಸೆ ನೀಡಿತ್ತು ಆ ಗ್ಯಾರಂಟಿಗಳಲ್ಲಿ ಒಂದು ಯೋಜನೆ ಯಾವುದೆಂದರೆ ಅದು ಅನ್ನಭಾಗ್ಯ ಯೋಜನೆ..
ಈ ಒಂದು ಯೋಜನೆಯ ಮೂಲಕ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ 10 KG ಅಕ್ಕಿ ಉಚಿತವಾಗಿ ವಿತರಣೆ ಮಾಡುತ್ತೇವೆ ಎಂದು ಭರವಸೆ ನೀಡಿತ್ತು ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ
ಅಧಿಕಾರಕ್ಕೆ ಬಂದ ಮೊದಲ ಆರು ತಿಂಗಳ ಒಳಗಡೆ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಯಿತು.! ಆದರೆ ಅನ್ನ ಭಾಗ್ಯ ಯೋಜನೆಯಲ್ಲಿ ಮೊದಲು ಕೇಂದ್ರ ಸರ್ಕಾರ ಕಡೆಯಿಂದ ಉಚಿತವಾಗಿ 5 ಕೆಜಿ ಅಕ್ಕಿ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ನೀಡಲಾಗುತ್ತಿತ್ತು ಮತ್ತು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವಂತೆ ಅನ್ನ ಭಾಗ್ಯ ಯೋಜನೆಯಲ್ಲಿ ಇನ್ನು ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಜನರಿಗೆ ನೀಡುವುದಾಗಿ ಭರವಸೆ ನೀಡಿತ್ತು.
ಆದರೆ ಅಕ್ಕಿಯ ಅಭಾವದಿಂದ ಕರ್ನಾಟಕ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿ ನೀಡುವುದು ಸಾಧ್ಯವಾಗಿಲ್ಲ ಹಾಗಾಗಿ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ರೂಪಾಯಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಾ ಬರಲಾಗಿದೆ..
ನಂತರ ಕಾಲ ದಿನಗಳಲ್ಲಿ ಅಕ್ಕಿ ಕೊರತೆ ನೀಗಿದ್ದರಿಂದ ರಾಜ್ಯದ ಜನತೆಗೆ ಕಳೆದ ಆರು ತಿಂಗಳಿಂದ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಒಟ್ಟು 10 ಕೆಜಿ ಅಕ್ಕಿಯನ್ನು ಪ್ರತಿಯೊಬ್ಬ ಸದಸ್ಯರಿಗೆ ನೀಡಲಾಗುತ್ತಿದೆ..
ಆದರೆ ಇನ್ನು ಮುಂದೆ ಈ ಹತ್ತು ಕೆಜಿ ಅಕ್ಕಿ ವಿತರಣೆ ಬದಲಾಗಿ ಹಲವಾರು ದವಸ ಧಾನ್ಯಗಳು ವಿತರಣೆ ಮಾಡಲು ಸರಕಾರ ನಿರ್ಧಾರ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿಯೋಣ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಕ್ಕಿಯ ಬದಲು ಇತರ ದವಸ ಧಾನ್ಯಗಳು ವಿತರಣೆ..?
ಹೌದು ಸ್ನೇಹಿತರೆ, ಇನ್ನು ಮುಂದೆ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಕ್ಕಿಯ ಬದಲು ಇತರೆ ದವಸ ಧಾನ್ಯಗಳನ್ನು ಪ್ರದೇಶಗಳ ಅನುಗುಣವಾಗಿ ವಿತರಣೆ ಮಾಡಲು ಹಾಗೂ ಈ ಬಗ್ಗೆ ಪರಿಶೀಲನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ..
ಇತ್ತೀಚಿಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನ ಸಭೆ ನಡೆಸಲಾಯಿತು. ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ ಜನತೆಗೆ ಇನ್ನು ಮುಂದೆ ಅಕ್ಕಿಯ ಬದಲು ಪ್ರದೇಶಗಳ ಅನುಗುಣವಾಗಿ ಸ್ಥಳೀಯರು ಬೆಳೆದ ಬೆಳೆಗಳಾದ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಪ್ರಸ್ತಾವನೆ ತರಲಾಗಿದೆ..
ಹೌದು ಸ್ನೇಹಿತರೆ ಈ ಒಂದು ಪ್ರಸ್ತಾವನೆಯ ಪ್ರಕಾರ ರಾಜ್ಯದ ಜನತೆಗೆ ಅಕ್ಕಿಯ ಜೊತೆಗೆ, ಬೇಳೆ, ಹೆಸರು, ರಾಗಿ, ಗೋಧಿ, ಅಡುಗೆ ಎಣ್ಣೆ, ಇತರೆ ಅಗತ್ಯ ವಸ್ತುಗಳನ್ನು ಈ ಒಂದು ಯೋಜನೆ ಅಡಿಯಲ್ಲಿ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ
ಹಾಗಾಗಿ ಮುಂದಿನ ಮೂರು ತಿಂಗಳ ಒಳಗಡೆ ಈ ಬಗ್ಗೆ ಹೊಸ ಮಾರ್ಗಸೂಚಿ ತಯಾರು ಮಾಡಿ ಹಾಗೂ ಯಾವ ಧಾನ್ಯಗಳನ್ನು ವಿತರಣೆ ಮಾಡಬೇಕು ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಈ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚೆ ಮಾಡಲಾಯಿತು
ಈ ಬಗ್ಗೆ ಯಾವುದೇ ಹೊಸ ಮಾಹಿತಿ ಬಂದರೆ ನಾವು ನಿಮಗೆ ಮತ್ತೆ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ ಭೇಟಿ ನೀಡಬಹುದು