ಬೆಳೆ ಪರಿಹಾರ: 30 ದಿನಗಳ ಒಳಗಡೆ ಬೆಳೆ ಪರಿಹಾರ ಬಿಡುಗಡೆ – ಕೃಷ್ಣ ಬೈರೇಗೌಡ
ನಮಸ್ಕಾರ ಗೆಳೆಯರ ಬೆಳೆ ಪರಿಹಾರ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಇದೀಗ ಕಂದಾಯ ಸಚಿವರಾದಂತ ಕೃಷ್ಣ ಬೈರೇಗೌಡರು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು ಗೆಳೆಯರೆ ಬೆಳೆ ಪರಿಹಾರ ಹಣ ಬಿಡುಗಡೆಯ ಬಗ್ಗೆ ಹೊಸ ಮಾಹಿತಿ ಹಂಚಿಕೊಂಡಿದ್ದು ನಾವು ಈ ಒಂದು ಲೇಖನ ಮೂಲಕ ಬೆಳೆ ಪರಿಹಾರ ಯಾವಾಗ ಬಿಡುಗಡೆಯಾಗಬಹುದು ಹಾಗೂ ಎಷ್ಟು ಬೆಳೆ ಪರಿಹಾರ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
30 ದಿನಗಳ ಒಳಗಡೆ ಬೆಳೆ ಪರಿಹಾರ ಹಣ ಬಿಡುಗಡೆ..?
ಹೌದು ಸ್ನೇಹಿತರೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಂತ ನಮ್ಮ ಕಂದಾಯ ಸಚಿವ ಕೃಷ್ಣ ಬೈರೇಗೌಡರು ರೈತರಿಗೆ ದೊಡ್ಡ ಭರವಸೆ ನೀಡಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ, ಮುಂದಿನ 30 ದಿನಗಳ ಒಳಗಡೆ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ..
ನೈರುತ್ಯ ಮುಂಗಾರು ಮಳೆಯಿಂದಾಗಿ ಸುಮಾರು 12.54 ಲಕ್ಷ ಹೆಕ್ಟರ್ ಭೂ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗಿದೆ ಈ ಬೆಳೆ ಹಾನಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಮಾರು 2000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ..
ಅದೇ ರೀತಿ ಜೂನ್ ನಿಂದ ಹಾಗೂ ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಮಳೆಯಿಂದ ಸುಮಾರು 5.29 ಲಕ್ಷ ಹೆಕ್ಟರ್ ಭೂ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಮತ್ತು ಈ ಸಮೀಕ್ಷೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಹಾಗೂ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಹಣ ಬಿಡುಗಡೆಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಮತ್ತು ಕೆಲ ರೈತರಿಗೆ ಈಗಾಗಲೇ ಪರಿಹಾರ ಹಣ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಮುಂದುವರೆದು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೀಮಾ ನದಿ ಪ್ರವಾಹದಿಂದ ತುಂಬಾ ರೈತರು ಬೆಳೆದ ಬೆಳೆಗಳು ನಷ್ಟ ಉಂಟಾಗಿದೆ ಇದರ ಜೊತೆಗೆ ಅತಿಯಾದ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಮತ್ತು ತುಂಬಾ ರೈತರ ಬೆಳೆ ಹಾನಿ ಒಳಗಾಗಿದೆ ಹಾಗಾಗಿ ಸರಿ ಸುಮಾರು 7.74ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಬೆಳೆ ನಷ್ಟ ಸಂಭವಿಸಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅದರಲ್ಲಿ ಅತಿ ಮುಖ್ಯವಾಗಿ ಯಾದಗಿರಿ, ಕಲಬುರಗಿ, ವಿಜಯಪುರ, ಮತ್ತು ಬೀದರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬೆಳೆ ಹಾನಿ ಉಂಟಾಗಿದೆ ಇದರಿಂದ ಈ ಜಿಲ್ಲೆಗಳಲ್ಲಿ ಮತ್ತೆ ಮರು ಸಮೀಕ್ಷೆ ಪ್ರಕ್ರಿಯೆ ಕಾರ್ಯ ಪ್ರಗತಿಯಲ್ಲಿ ಇದೆ ಹಾಗೂ ಈ ಕೆಲಸ ಇನ್ನೂ 10 ದಿನಗಳ ಒಳಗಡೆ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಇನ್ನು 30 ದಿನಗಳ ಒಳಗಡೆ ರೈತರ ಖಾತೆಗೆ, ಬೆಳೆ ಪರಿಹಾರ ಹಣ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ಕೊಟ್ಟಿದ್ದಾರೆ
ಎಷ್ಟು ಬೆಳೆ ಪರಿಹಾರ ಹಣ ಸಿಗುತ್ತೆ..?
ಈಗಾಗಲೇ ನಮ್ಮ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಸುಮಾರು 5.29 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ ಮತ್ತು ಈ ಸಮೀಕ್ಷೆ ಪೂರ್ಣಗೊಂಡಿದೆ ಹಾಗೂ ಈಗಾಗಲೇ ಪರಿಹಾರ ಹಣ ಬಿಡುಗಡೆಯ ಪ್ರಕ್ರಿಯೆ ಆರಂಭವಾಗಿದೆ ಹಾಗಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟರ್ ಪ್ರದೇಶದ ಬೆಳೆ ನಷ್ಟಕ್ಕೆ 8,500 ವರೆಗೆ ಹೆಚ್ಚುವರಿ ಪರಿಹಾರ ಹಣವನ್ನು ನೀಡುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ರೈತರಿಗೆ ಈ ರೀತಿಯಾಗಿ ಪರಿಹಾರ ಹಣ ಸಿಗುತ್ತದೆ:-
- ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟರ್ ಬೆಳೆ ಹಾನಿಗೆ ₹17,000 ವರೆಗೆ ಪರಿಹಾರ ಹಣ ಸಿಗುತ್ತೆ
- ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟರ್ ಬೆಳೆ ಹಾನಿಗೆ ₹25,500 ವರೆಗೆ ಪರಿಹಾರ ಹಣ ಸಿಗುತ್ತೆ
- ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟರ್ ಬೆಳೆ ಹಾನಿಗೆ ₹31,000 ವರೆಗೆ ಪರಿಹಾರ ಹಣ ಸಿಗುತ್ತೆ
ಸ್ನೇಹಿತರೆ ಬೆಳೆ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ ಹಾಗಾಗಿ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ekyc ಪೂರ್ಣಗೊಳಿಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಮತ್ತು ಕಡ್ಡಾಯವಾಗಿ ರೈತರು ತಮ್ಮ ಜಮೀನಿಗೆ FID ಕ್ರಿಯೇಟ್ ಮಾಡಿಸಿ ಹಾಗೂ ಪಿಎಂ ಕಿಸಾನ್ ಯೋಜನೆಗೆ Ekyc ಪೂರ್ಣಗೊಳಿಸಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿಗಾಗಿ
ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
SSLC ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ರಾಜ್ಯ ಸರ್ಕಾರ ಹೀಗೆ ಮಾಡುವುದು ಎಷ್ಟು ಸರಿ.? ಇಲ್ಲಿದೆ ಮಾಹಿತಿ