ಅನರ್ಹ ಬಿಪಿಎಲ್ ಪಡಿತರ ಚೀಟಿ ರದ್ದು: ಸುಮಾರು 7.76 ಲಕ್ಷ ಕಾರ್ಡುಗಳು ರದ್ದು.! ನಿಮ್ಮ ಕಾರ್ಡ್ ಹೆಸರು ಇದಿಯಾ ಈ ರೀತಿ ಚೆಕ್ ಮಾಡಿ
ನಮಸ್ಕಾರ ಗೆಳೆಯರೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಇದೀಗ ಬಿಪಿಎಲ್ ಪಡಿತರ ಚೀಟಿದಾರರಿಗೆ ಶಾಕಿಂಗ್ ನ್ಯೂಸ್.! ನಮ್ಮ ಕರ್ನಾಟಕದಲ್ಲಿ ಸುಮಾರು 7.76 ಲಕ್ಷ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ತಕ್ಷಣ ರದ್ದು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಸುಮಾರು 13,87,651 ಬಿಪಿಎಲ್ ಪಡಿತರ ಚೀಟಿಯನ್ನು ಅನರ್ಹ ಎಂದು ರಾಜ್ಯ ಸರ್ಕಾರ ಗುರುತು ಮಾಡಿದೆ ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ..
ಶೀಘ್ರವೇ 7.76 ಲಕ್ಷ ಬಿಪಿಎಲ್ ಪಡಿತರ ರದ್ದು ಸೂಚನೆ..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ನಮ್ಮ ಕರ್ನಾಟಕದಲ್ಲಿ ಸುಮಾರು 7.76 ಲಕ್ಷ ಅನರ್ಹ ಬಿಪಿಎಲ್ ಪಡಿತರ ಚೀಟಿಯನ್ನು ಗುರುತು ಮಾಡಿದೆ ಹಾಗೂ ಶೀಘ್ರದಲ್ಲೇ ಈ ಪಡಿತರ ಚೀಟಿ ರದ್ದು ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.!

ಕೇಂದ್ರ ಸರ್ಕಾರ ಆದೇಶ ನೀಡಿರುವ ಪ್ರಕಾರ 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದ ಸುಮಾರು 5.80 ಲಕ್ಷ ಬಿಪಿಎಲ್ ಪಡಿತರ ಚೀಟಿಗಳು ಗುರುತು ಮಾಡಲಾಗಿದೆ ಹಾಗೂ ಇತರ ಅರ್ಹತೆ ಹೊಂದಿಲ್ಲದಂತ ಕುಟುಂಬಗಳ bpl ರೇಷನ್ ಕಾರ್ಡ್ ಗುರುತು ಮಾಡಿ ಸುಮಾರು 7.76 ಲಕ್ಷ ಕಾಡುಗಳನ್ನು ಶೀಘ್ರದಲ್ಲಿ ರದ್ದು ಮಾಡುವಂತೆ ಸೂಚನೆ ನೀಡಿದೆ
ಸಿಎಂ ಸಿದ್ದರಾಮಯ್ಯನವರು ಹೊಸ ಸೂಚನೆ ಬಿಡುಗಡೆ..?
ಹೌದು ಗೆಳೆಯರೇ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಈ ಸಭೆಯಲ್ಲಿ ಅವರು ಮಾತನಾಡುತ್ತ ಕೇಂದ್ರ ಸರ್ಕಾರ ಸುಮಾರು 7.76 ಲಕ್ಷ ಅನರ್ಹ ಬಿಪಿಎಲ್ ಪಡಿತರ ಚೀಟಿಯನ್ನು ಗುರುತು ಮಾಡಿದೆ ಹಾಗೂ ಈ ಪಡಿತರ ಕಾರ್ಡ್ ರದ್ದು ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ನಾವು ಶೀಘ್ರದಲ್ಲೇ ಈ ಕಾಡುಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಮಾಹಿತಿ ತಿಳಿಸಿದ್ದಾರೆ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಂಟಿ ಸಹಯೋಗದಲ್ಲಿ ಇಲ್ಲಿವರೆಗೂ ಸುಮಾರು 13,87651 ಪಡಿತರ ಚೀಟಿಗಳನ್ನು ಅನರ್ಹ ಎಂದು ಗುರುತಿಸಲಾಗಿದೆ ಇದರಲ್ಲಿ ಸಾಕಷ್ಟು ಜನರು 1.20 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿದ್ದಾರೆ ಹಾಗೂ ನಾಲ್ಕು ಚಕ್ರದ ವಾಹನಗಳು ಮತ್ತು ಆದಾಯ ತೆರಿಗೆ ಪಾವತಿ ಮಾಡುವವರು ಮತ್ತು GST ನಂಬರ್ ಹೊಂದಿದವರು ಒಟ್ಟು 25 ಲಕ್ಷಕ್ಕಿಂತ ಹೆಚ್ಚಿನ ವೈವಾಟು ನಡೆಸಿದ್ದಾರೆ ಹಾಗೂ ಕೆಲ ಸರಕಾರಿ ಹುದ್ಯೋಗಿಗಳು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಆತಂಕ ಕಾರ್ಯ ವಿಷಯವೆಂದು ತಿಳಿಸಿದ್ದಾರೆ.
ಹಾಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಸೆಪ್ಟೆಂಬರ್ 30ರ ಒಳಗಡೆ ಇಂಥ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತದೆ ಹಾಗೂ ರದ್ದು ಮಾಡುವಂತೆ ಆಹಾರ ಇಲಾಖೆಗೆ ಸೂಚನೆ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗುರುತಿಸಿರುವ ಕರ್ನಾಟಕದಲ್ಲಿ ಅನರ್ಹ ರೇಷನ್ ಕಾರ್ಡ್ ಗಳ ಪಟ್ಟಿ ವಿವರಗಳನ್ನು ನಾವು ಕೆಳಗಡೆ ಒಂದು ಫೋಟೋದಲ್ಲಿ ತೋರಿಸಿದ್ದೇವೆ

ನಿಮ್ಮ ರೇಷನ್ ಕಾರ್ಡ್ ರದ್ದು ಆಗಿದೆಯಾ ಅಥವಾ ಇಲ್ಲ ಎಂಬ ಮಾಹಿತಿ ತಿಳಿಯುವುದು ಹೇಗೆ..?
ಸ್ನೇಹಿತರೆ ನೀವು ಮೊದಲು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ (https://ahara.karnataka.gov.in/Home/EServices)
- ನಂತರ ಎಡಗಡೆ ಭಾಗದಲ್ಲಿ ಈ ಪಡಿತರ ಚೀಟಿ ಅಥವಾ ಈ ರೇಷನ್ ಸರ್ವಿಸ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಅಲ್ಲಿ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಡಿತರ ಚೀಟಿ ಪಟ್ಟಿ ಎಂದು ಕಾಣುತ್ತದೆ ಆ ಒಂದು ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ಅಲ್ಲಿ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಥವಾ ಜಿಲ್ಲೆ ಅಥವಾ ತಾಲೂಕು ವ್ಯಾಪ್ತಿಗೆ ಬರುವ ರದ್ದಾದ ರೇಷನ್ ಕಾರ್ಡ್ ಪಟ್ಟಿಗಳ ವಿವರ ನೋಡಲು ಸಿಗುತ್ತದೆ
- ಈ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಹೆಸರು ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಬಹುದು
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಬಹುದು
Indian Railway Recruitment 2025 – ಭಾರತೀಯ ರೈಲ್ವೆ ನೇಮಕಾತಿ 2025