Constable Recruitment 2025- SSLC, ITI ಪಾಸಾದವರಿಗೆ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನಮಸ್ಕಾರ ಸ್ನೇಹಿತರೆ sslc ಮತ್ತು ಐಟಿಐ ಪಾಸಾದವರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್..! ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ ವಿವಿಧ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅರ್ಜಿ ಆರಂಭ ಮಾಡಿದೆ ಹಾಗಾಗಿ ಆಸಕ್ತಿ ಇರುವವರು ಬೇಗ ಅರ್ಜಿ ಸಲ್ಲಿಕೆ ಮಾಡಿ
ಕಾನ್ಸ್ಟೇಬಲ್ ಹುದ್ದೆಗಳಿಗೆ (Constable Recruitment 2025) ಅರ್ಜಿ ಆಹ್ವಾನ..?
ಹೌದು ಸ್ನೇಹಿತರೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲಿ ಕಾರ್ಯನಿರ್ವಹಿಸಲು ಬೇಕಾಗಿರುವಂತ ಸುಮಾರು 3588 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.! ಆದ್ದರಿಂದ ಆಸಕ್ತಿ ಇರುವವರು ಈ ಹುದ್ದೆಗಳಿಗೆ ಕೇವಲ 10 ನೇ ತರಗತಿ ಪಾಸ್ ಆಗಿದ್ದರೆ ಅರ್ಜಿ ಸಲ್ಲಿಕೆ ಮಾಡಬಹುದು

ಹೌದು ಸ್ನೇಹಿತರೆ ನಾವು ಈ ಒಂದು ಲೇಖನಿಯ ಮೂಲಕ BSF ಬಿಡುಗಡೆ ಮಾಡಿರುವ ವಿವಿಧ ಕಾನ್ಸ್ಟೇಬಲ್ ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇತರ ವಿವರಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಳ್ಳೋಣ
ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ವಿವರ..?
ನೇಮಕಾತಿ ಸಂಸ್ಥೆ:- BSF
ಖಾಲಿ ಹುದ್ದೆಗಳ ಸಂಖ್ಯೆ:- 3588 ಹುದ್ದೆಗಳು
ಹುದ್ದೆಗಳ ಹೆಸರು:- ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ /CPC
ಅರ್ಜಿ ಪ್ರಾರಂಭ ದಿನಾಂಕ:- 01/08/2025
ಅರ್ಜಿ ಕೊನೆಯ ದಿನಾಂಕ:- 31/08/2025
ಅರ್ಜಿ ಶುಲ್ಕ:- ₹100/-
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ಸ್ನೇಹಿತರೆ ಬಿಎಸ್ಎಫ್ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇ ತರಗತಿ ಹಾಗೂ ಐಟಿಐ ಪಾಸಾದರೆ ಸಾಕು ಅರ್ಜಿ ಸಲ್ಲಿಕೆ ಮಾಡಬಹುದು
ವಯೋಮಿತಿ ಎಷ್ಟು:- ಬಿಎಸ್ಎಫ್ ನೇಮಕಾತಿ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಕಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಹೊಂದಿರಬೇಕು ಮತ್ತು ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ನೀಡಲಾಗಿದೆ
ಅರ್ಜಿ ಶುಲ್ಕ ಎಷ್ಟು:- ಸಾಮಾನ್ಯ ಹಾಗೂ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ₹100/- ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ
ಸಂಬಳ ಎಷ್ಟು:- ಬಿಎಸ್ಎಫ್ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ ಕನಿಷ್ಠ ₹21,700/- ಗರಿಷ್ಠ ₹45,000/- ವರೆಗೆ ಸಂಬಳ ನೀಡಲಾಗುತ್ತದೆ ಹಾಗೂ ಸರಕಾರದ ಇತರ ಸೌಲಭ್ಯಗಳು ಸಿಗುತ್ತವೆ
ಅರ್ಜಿ ಸಲ್ಲಿಸುವುದು (Constable Recruitment 2025) ಹೇಗೆ …?
ಸ್ನೇಹಿತರ ಬಿಎಸ್ಎಫ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ನೀವು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದಾರೆ ಮೊದಲು ಈ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ನಂತರ ಎಲ್ಲಾ ಮಾಹಿತಿ ಸರಿಯಾಗಿ ಓದಿಕೊಂಡು ಕೆಳಗಡೆ ನೀಡಿರುವ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು