ಬೆಳೆಹಾನಿ ಪರಿಹಾರ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ.? ಇಲ್ಲಿದೆ ನೋಡಿ ಮಾಹಿತಿ
ಗೆಳೆಯರೇ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಮಾಹಿತಿ ಹೊರಬಂದಿದೆ. ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಭಾರಿ ಮಳೆಯ ಪ್ರಭಾವದಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಪ್ರದೇಶಗಳಲ್ಲಿ ಸಾಕಷ್ಟು ಜಲಾವೃತಗೊಂಡಿದೆ ಇದರಿಂದ ಸರಿಸುಮಾರು 5.29 ಲಕ್ಷ ಹೆಕ್ಟರ್ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟ ಉಂಟಾಗಿವೆ ಹಾಗಾಗಿ ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಕೃಷ್ಣೆ ಬೈರೇಗೌಡರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿದುಕೊಳ್ಳೋಣ
ಬೆಳೆಹಾನಿ ಪರಿಹಾರ ಯಾವಾಗ ಬಿಡುಗಡೆ..?
ನಮ್ಮ ರಾಜ್ಯದ ಕಂದಾಯ ಸಚಿವರಾಗಿರುವ ಕೃಷ್ಣೆಬೈರೇಗೌಡರು ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಕೃಷ್ಣೆ ಬೈರೇಗೌಡರು ಮಾಹಿತಿ ತಿಳಿಸಿರುವ ಪ್ರಕಾರ ಈಗಾಗಲೇ ಬೆಳೆ ಹಾನಿ ಜಯಂತಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಹಾಗಾಗಿ ಈ ಸಮೀಕ್ಷೆ ಮುಗಿದ ನಂತರ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಹಣ ಪಾವತಿ ಮಾಡಲಾಗುತ್ತದೆ ಎಂದು ಕೃಷ್ಣಬೈರೇಗೌಡರ ಮಾಹಿತಿ ತಿಳಿಸಿದ್ದಾರೆ.

ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಮುಂದುವರೆದು ಉತ್ತರ ಕರ್ನಾಟಕದ ಭೀಮ ಜಲಾನಯದ ಪ್ರದೇಶಗಳ ವ್ಯಾಪ್ತಿಯಲ್ಲಿ ನದಿ ಪ್ರವಾಹದಿಂದ ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸುಮಾರು 7.24 ಲಕ್ಷ ಹೆಕ್ಟರ್ ಬೆಳೆ ನಷ್ಟ ಆಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಈ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 10 ದಿನಗಳಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಹಾಗೂ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟರ್ ಬೆಳೆ, ಹಾನಿಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ..
ಈಗಾಗಲೇ ಬೆಳೆ ಹಾನಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಲಾದ ಒಂಬತ್ತು ಜಿಲ್ಲೆಗಳಲ್ಲಿ ಸರಿಸುಮಾರು 5.29 ಲಕ್ಷ ಹೆಕ್ಟರ್ ಭೂಪ್ರದೇಶದ ಬೆಳೆ ಹಾನಿ ಪರಿಹಾರ ಮೊದಲ ಸುತ್ತಿನ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಬೆಳೆಹಾನಿ ಪರಿಹಾರದ ಹಣ ಎಷ್ಟು ಸಿಗುತ್ತದೆ..?
ಸ್ನೇಹಿತರು ರಾಜ್ಯ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಬೆಳೆ ಹಾನಿ ಪರಿಹಾರದ ಹಣ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರದ ವತಿಯಿಂದ ಪ್ರತಿ ಎಕರೆಗೆ ಎಷ್ಟು ಹಣ ಸಿಗುತ್ತದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ತಿಳಿಸಿದ್ದೇವೆ
ರಾಜ್ಯ ಸರ್ಕಾರ ಪ್ರತಿ ಹೆಕ್ಟರ್ ಗೆ ಸರಿಸುಮಾರು ರೂ.8500 ಹಣವನ್ನು ಹೆಚ್ಚುವರಿ ಯಾಗಿ ಪಾವತಿಸುತ್ತದೆ ಎಂದು ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯನವರು ಮಾಹಿತಿ ತಿಳಿಸಿದ್ದಾರೆ.
- ಮಳೆ ಆಶ್ರಿತ ಬೆಳೆಗಳಿಗೆ ಪ್ರತಿ ಎಕರೆಗೆ ₹17,000/- ವರೆಗೆ ರೂಪಾಯಿ ಹಣ ಸಿಗುತ್ತದೆ
- ನೀರಾವರಿ ಬೆಳೆಗಳಿಗೆ ಪ್ರತಿ ಎಕರೆಗೆ ₹25,500/- ವರೆಗೆ ಹಣ ಸಿಗುತ್ತೆ
- ದೀರ್ಘಕಾಲಿಕ ಹಾಗೂ ಬಹು ಬೆಳೆಗಳಿಗೆ: ₹31,100/- ವರೆಗೆ ವರೆಗೆ ಪರಿಹಾರ ಹಣ ಸಿಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಒಂದು ಲೇಖನವನ್ನು ಆದಷ್ಟು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
ಚಿನ್ನದ ಬೆಲೆ: ಎರಡು ದಿನದಲ್ಲಿ ಬರೋಬ್ಬರಿ ₹26200 ಬೆಲೆ ಏರಿಕೆ.! ಇಂದಿನ ಚಿನ್ನದ ಬೆಲೆ ಎಷ್ಟು.?

One thought on “ಬೆಳೆಹಾನಿ ಪರಿಹಾರ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ.? ಇಲ್ಲಿದೆ ನೋಡಿ ಮಾಹಿತಿ”