ಮಳೆಯಿಂದ ಬೆಳೆ ಹಾನಿ: ಜಂಟಿ ಸಮೀಕ್ಷೆಯ ನಂತರ ರೈತರಿಗೆ ಪರಿಹಾರ, ಸಿಎಂ ಸಿದ್ದರಾಮಯ್ಯ
ನಮಸ್ಕಾರ ಸ್ನೇಹಿತರೆ ಸರಕಾರದಿಂದ ಬೆಳೆ ಸಾಲ ಮನ್ನ ನಿರೀಕ್ಷೆಯಲ್ಲಿ ಇದ್ದವರಿಗೆ ಇದೀಗ ಸಿಹಿ ಸುದ್ದಿ.! ಹೌದು ಗೆಳೆಯರೆ ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು ಸಾಲಮನ್ನದ ಬಗ್ಗೆ ನೋಡೋಣ ಎಂದು ಮಾಹಿತಿ ನೀಡಿದ್ದಾರೆ ಹಾಗೂ ಇನ್ನೂ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ ಹಾಗಾಗಿ ನಾವು ಈ ಲೇಖನಿಯಲ್ಲಿ ಸಂಪೂರ್ಣ ವಿಷಯ ತಿಳಿದುಕೊಳ್ಳೋಣ
ಬೆಳೆ ಸಮೀಕ್ಷೆ ನಂತರ ರೈತರಿಗೆ ಬೆಳೆ ಪರಿಹಾರ..?
ಹೌದು ಗೆಳೆಯರೇ, ಭಾರೀ ಮಳೆಯಿಂದ ಹಾಗೂ ಪ್ರವಾಹದಿಂದ ರೈತರು ಬೆಳೆದ ಬೆಳೆಗಳು ಹಾನಿ ಉಂಟಾಗಿದೆ ಹಾಗಾಗಿ ರೈತರಿಗೆ ಸಮಸ್ಯೆ ಪರಿಹರಿಸಲು ಹಾಗೂ ರೈತರಿಗೆ ಪರಿಹಾರ ನೀಡುವ ಜವಾಬ್ದಾರಿಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ

ಮೊದಲು ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ರೈತರ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸೂಚನೆ ನೀಡಲಿದೆ. ಅದಾದ ನಂತರ ಬೆಳೆ ಪರಿಹಾರದ ನಷ್ಟವನ್ನು ವಿತರಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಹಾಗೂ ಈ ವರ್ಷ ಶೇಕಡ 17ರಷ್ಟು ಮಳೆ ಹೆಚ್ಚಾಗಿದ್ದರಿಂದ ಸಾಕಷ್ಟು ಜನರ ಜೀವ ಹೋಗಿದೆ ಹಾಗೂ 37 ಜನರು ಈ ಮಳೆಯಿಂದ ಜೀವ ಕಳೆದುಕೊಂಡಿದ್ದಾರೆ ಹಾಗೂ ತುಂಬಾ ರೈತರ ಬೆಳೆಗಳು ನಷ್ಟ ಉಂಟಾಗಿದೆ
ಅದರಲ್ಲಿ ಕೆಲವು ಸ್ಥಳಗಳಲ್ಲಿ ಅಂದರೆ ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಿಂದ ರೈತರ ಬೆಳೆ ನಷ್ಟ ಉಂಟಾಗಿದ್ದು ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಭರವಸೆ ನೀಡುತ್ತಾರೆ
ಮುಂದುವರೆದು ವಿಮೆ ಇಲ್ಲದ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಪ್ರಶ್ನೆ ಕೇಳಿದರು ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ನಾವು ಚರ್ಚಿಸಿ ಪರಿಗಣಿಸುತ್ತೇವೆ ಎಂದು ಮಾಹಿತಿ ತಿಳಿಸಿದ್ದೇವೆ
ರೈತರ ಬೆಳೆ ಸಾಲ ಮನ್ನಾ ಬಗ್ಗೆ ಮಾತುಕತೆ..?
ಹೌದು ಗೆಳೆಯರೇ ಸಾಕಷ್ಟು ರೈತರು ಬೆಳೆ ಸಾಲ ಮನ್ನಾ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ರೈತರ ಬೆಳೆ ಸಾಲ ಮನ್ನದ ಕುರಿತು ಪ್ರತಿಕ್ರಿಯೆ ನೀಡಿದ್ದು ಬೆಳೆ ಸಾಲ ಮನ್ನಾ ಮಾಡುವುದು ನೋಡೋಣ ಎಂದು ಹಾಗೂ ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು
ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ