HDFC Scholarship 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಉನ್ನತ ಶಿಕ್ಷಣ ಪಡೆಯಲು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಬಯಸಿದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ HDFC Parivartan Scholarship ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಸುಮಾರು 75,000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು. ಹಾಗಾಗಿ ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಜಿಯೋ ಕೇವಲ 75 ರೂಪಾಯಿಗೆ 28 ದಿನದ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಇಲ್ಲಿದೆ ಮಾಹಿತಿ
ಸ್ನೇಹಿತರೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ರೀತಿ ಸ್ಕಾಲರ್ಶಿಪ್ (scholarship ) ಯೋಜನೆಗಳು ಹಾಗೂ ಖಾಸಗಿ (private scholarship) ಕಂಪನಿಯ ಸ್ಕಾಲರ್ಶಿಪ್ ಯೋಜನೆಗಳು & ನಮ್ಮ ಕರ್ನಾಟಕದ ಪ್ರಮುಖ (Karnataka headlines) ಸುದ್ದಿಗಳು ಹಾಗೂ ರೈತರಿಗೆ (farmer schemes) ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು (daily updates) WhatsApp Telegram ಗ್ರೂಪಿಗೆ (jion) ಜಾಯಿನ್ ಆಗಬಹುದು
ರೇಷನ್ ಕಾರ್ಡ್ ಇದ್ದವರು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ರೂ.30,000 ಹಣ ಪಡೆಯಿರಿ ಇಲ್ಲಿದೆ ಮಾಹಿತಿ
HDFC ವಿದ್ಯಾರ್ಥಿ ವೇತನ (HDFC Scholarship 2024)..?
ಹೌದು ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಹಿಂದುಳಿದ ವರ್ಗದವರಿಗೆ ಸೇರಿದಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉತ್ತಮ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಒಂದು ಸ್ಕಾಲರ್ಶಿಪ್ ಯೋಜನೆ ಪ್ರಾರಂಭಿಸಲಾಗಿದೆ ಮತ್ತು ಈ HDFC ಬ್ಯಾಂಕ್ ECSS ಕಾರ್ಯಕ್ರಮದ ಅಡಿಯಲ್ಲಿ ಈ ಒಂದು ಸ್ಕಾಲರ್ಶಿಪ್ ಯೋಜನೆಯನ್ನು ಪ್ರಾರಂಭ ಮಾಡಲಾಗಿದ್ದು ಆಸಕ್ತಿ ಇರುವಂತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು

ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು (HDFC Scholarship 2024)..?
ಸ್ನೇಹಿತರೆ HDFC ಬ್ಯಾಂಕ್ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಅಂದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ 1 ರಿಂದ 12ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮೋ, ITI & ಪಾಲಿಟೆಕ್ನಿಕ್, ಪದವಿ ಮುಂತಾದ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವಂತಹ ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವವರು ಮತ್ತು ಖಾಸಗಿ ಶಾಲೆಯಲ್ಲಿ ಓದುತ್ತಿರುವವರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು
HDFC ವಿದ್ಯಾರ್ಥಿ ವೇತನದ (HDFC Scholarship 2024) ಪ್ರಯೋಜನಗಳು..?
- 1 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ:- ₹15,000/-
- 7 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ:- ₹18,000/-
- ಪದವಿಪೂರ್ವ ಕೋರ್ಸ್ ಗಳಿಗೆ:- ₹30,000/-
- ವೃತ್ತಿಪರ ಪದವಿಪೂರ್ವ ಕೋರ್ಸ್ ಗಳಿಗೆ:- ₹50,000/-
ಸ್ನೇಹಿತರ ಮೇಲೆ ತಿಳಿಸಿರುವಂತೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳಿಗೆ ಯಾವ ತರಗತಿ ಅಥವಾ ಪದವಿ ಮುಂತಾದ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಮೇಲೆ ನೀಡಿದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಮತ್ತು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ವಿವರ ಕೆಳಗಡೆ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (HDFC Scholarship 2024)..?
- HDFC ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಭಾರತ ದೇಶದಲ್ಲಿ ವಾಸ ಮಾಡುತ್ತಿರಬೇಕು
- HDFC ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಭಾರತ ಸರಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ, ವೃತ್ತಿಪರ ಕೋರ್ಸ್ ಗಳು ಅಥವಾ ಇತರ ಯಾವುದೇ ಕೋರ್ಸ್ ಗಳನ್ನು ವ್ಯಾಸಂಗ ಮಾಡುತ್ತಿರಬೇಕು.
- 1 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಾಸಾಗಿರಬೇಕು
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಅಥವಾ ವಿದ್ಯಾರ್ಥಿಗಳು ಕುಟುಂಬದ ಆದಾಯ 3 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (HDFC Scholarship 2024)..?
- ಹಿಂದಿನ ತರಗತಿಯ ಅಂಕಪಟ್ಟಿಗಳು
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಪ್ರವೇಶ ಪತ್ರ ಅಥವಾ ಪ್ರವೇಶ ಶುಲ್ಕ
- ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
- ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ
- ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ
- ಕುಟುಂಬದ ಆದಾಯ ಪ್ರಮಾಣ ಪತ್ರ
- ಆದಾಯ ಪುರಾವೆಗಳು
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ (HDFC Scholarship 2024)..?
ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಅಕ್ಟೋಬರ್ 30 2024 ರ ಒಳಗಾಗಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕನ್ನು ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು