HMT Recruitment 2025; – ಬೆಂಗಳೂರಿನಲ್ಲಿ ಕೆಲಸ, ತಿಂಗಳಿಗೆ ₹45,000/- ವರೆಗೆ ಸಂಬಳ, ಬೇಗ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ಪದವಿ ಪಾಸಾದವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಅವಕಾಶ.! ಹೌದು ಸ್ನೇಹಿತರೆ ಎಚ್ ಎಮ್ ಟಿ ಲಿಮಿಟೆಡ್ ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತೆ ಎಂಜಿನಿಯರಿಂಗ್ ಸಂಸ್ಥೆ, FTA ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ನಾವು ಈ ಹುದ್ದೆಗಳ ನೇಮಕಾತಿ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಹೊಸ ನೇಮಕಾತಿ 2025 (HMT Recruitment 2025)..?
ಹೌದು ಸ್ನೇಹಿತರೆ ಎಚ್ ಎಮ್ ಟಿ ಲಿಮಿಟೆಡ್ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ.! ಈ ಸಂಸ್ಥೆ ಫಿಕ್ಸೆಡ್ ಟರ್ಮ್ ಅಪಾರ್ಟ್ಮೆಂಟ್ ಆದಾರದ ಮೇಲೆ ವಿವಿಧ ವೃತ್ತಿಪರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು

ಒಂದು ವೇಳೆ ನೀವು ಈ ಹುದ್ದೆಗಳಿಗೆ ಆಯ್ಕೆಯಾದರೆ ನಿಮಗೆ ತಿಂಗಳಿಗೆ 45,000 ವರೆಗೆ ಸಂಬಳ ಸಿಗುತ್ತದೆ ಹಾಗಾಗಿ ನಾವು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇತರ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಹುದ್ದೆಗಳ ನೇಮಕಾತಿ ವಿವರ (HMT Recruitment 2025 Notification).?
ನೇಮಕಾತಿ ಸಂಸ್ಥೆ :- HMT
ಖಾಲಿ ಹುದ್ದೆಗಳ ಸಂಖ್ಯೆ:- 12 ಖಾಲಿ ಹುದ್ದೆಗಳು
ಹುದ್ದೆಗಳ ವಿವರ:- ವಿವಿಧ ಹುದ್ದೆಗಳು
ಖಾಲಿ ಹುದ್ದೆಗಳ ವಿವರ:-
1) ಡೆಪ್ಯೂಟಿ ಮೆನೇಜರ್ (finance) PS IV ಗ್ರೇಡ್ ಹುದ್ದೆಗಳು :- 09 ಖಾಲಿ ಹುದ್ದೆಗಳು
2) ಆಫೀಸರ್ (company security) PS III ಗ್ರೇಡ್ ಹುದ್ದೆಗಳು:- 01
3) ಆಫೀಸರ್ (legal) PS III :- 01 ಹುದ್ದೆಗಳು
4) ಹಿಂದಿ ಆಫೀಸರ್ ಹುದ್ದೆ :- 01
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?
ವಿದ್ಯಾರ್ಹತೆ:- ವಿವಿಧ ಹುದ್ದೆಗಳ ಅನುಗುಣವಾಗಿ ಅರ್ಜಿದಾರರು ಪದವಿ ಹಾಗೂ CA/CMA/ICWA/MA ಗ್ರಾಜುಯೇಟ್ ಜೊತೆಗೆ ACS/LLB ಅಥವಾ ಪದವಿ ಹಾಗೂ ಕಂಪ್ಯೂಟರ್ ಕೌಶಲ್ಯ ಹೊಂದಿರಬೇಕು
ಇದರ ಜೊತೆಗೆ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಕ್ಕೆ (ST) ಸೇರಿದರೆ ಕನಿಷ್ಠ 50% ಅಂಕ ಗಳಿಸಿರಬೇಕು ಹಾಗೂ ಸಾಮಾನ್ಯ ವರ್ಗದವರು ಕನಿಷ್ಠ 60% ಅಂಕಗಳು ಇರಬೇಕು ಹಾಗೂ ಸ್ಥಳೀಯ ಭಾಷೆಯ ಜ್ಞಾನ ಮತ್ತು ಕಂಪ್ಯೂಟರ್ ಕೌಶಲ್ಯ ಹೊಂದಿರಬೇಕು ಇದರ ಜೊತೆಗೆ ಕನಿಷ್ಠ ಎರಡು ವರ್ಷದ ಅನುಭವ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾಗುತ್ತದೆ ಹಾಗಾಗಿ ಇನ್ನು ಹೆಚ್ಚಿನ ವಿವರಕ್ಕಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ವಯೋಮಿತಿ ಎಷ್ಟು:- ನೇಮಕಾತಿ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ ಹೆಚ್ಚಿನ ವಿವರಕ್ಕಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಸಂಬಳ ಎಷ್ಟು:- ಎಚ್ ಎಮ್ ಟಿ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ನಂತರ ಹುದ್ದೆಗಳ ಅನುಗುಣವಾಗಿ ತಿಂಗಳಿಗೆ 20,600 ಇಂದ 46,500 ವರೆಗೆ ನೀಡಲಾಗುತ್ತದೆ ಮತ್ತು ಹೆಚ್ಚುವರಿಯಾಗಿ ಡಿಎ ಹಾಗೂ ಹೆಚ್ ಆರ್ ಎ ಮತ್ತು ಪಿಎಫ್ ಮುಂತಾದ ಸೌಲಭ್ಯಗಳು ಉದ್ಯೋಗಿಗಳು ಪಡೆದುಕೊಳ್ಳಲು ಅವಕಾಶವಿದೆ
ಅರ್ಜಿ ಶುಲ್ಕ:-
- ಸಾಮಾನ್ಯ /EWS/OBC ಅಭ್ಯರ್ಥಿಗಳಿಗೆ 750 ರೂಪಾಯಿ ಅರ್ಜಿ ಶುಲ್ಕ
- SC/ST ಅಭ್ಯರ್ಥಿಗಳಿಗೆ :- 250 ರೂಪಾಯಿ ಅರ್ಜಿ ಶುಲ್ಕ
- ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮೊದಲು ಎಚ್ಎಂಟಿ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ ನಂತರ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಅಗತ್ಯ ದಾಖಲಾತಿಗಳನ್ನು ಕೆಳಗಡೆ ನೀಡಿದ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕೋರಿಯರ್ ಮೂಲಕ ಕಳಿಸಿ
ದಿ ಮ್ಯಾನೇಜರ್ (Corporate HR),
ಎಚ್ ಎಮ್ ಟಿ ಲಿಮಿಟೆಡ್, ನಂಬರ್ 59,
ಎಚ್ಎಂಟಿ ಭವನ, ಬಳ್ಳಾರಿ ರಸ್ತೆ , ಬೆಂಗಳೂರು:- 560032
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಹಾಗೂ ಪ್ರತಿದಿನ ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ
ನಮ್ಮ ವಾಟ್ಸಪ್ ಚಾನೆಲ್ಗಳಿಗೆ ಸೇರಿಕೊಳ್ಳಬಹುದು