indian air force recruitment 2025: ಭಾರತೀಯ ವಾಯುಪಡೆ ಹೊಸ ನೇಮಕಾತಿ, 10Th ಪಾಸ್ ಆದವರು ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಭಾರತೀಯ ವಾಯುಪಡೆ ಇದೀಗ ಅಗ್ನಿವೀರ್ ವಾಯು ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ನೀವು ಅಗ್ನಿಪತ್ ಯೋಜನೆ ಅಡಿಯಲ್ಲಿ ಖಾಲಿ ಇರುವಂತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಈ ಒಂದು ಲೇಖನೆಯನ್ನು ಪೂರ್ತಿಯಾಗಿ ಓದಿ.
ಹೌದು ಸ್ನೇಹಿತರೆ ನಾವು ಈ ಒಂದು ಲೇಖನಿಯ ಮೂಲಕ ಅಗ್ನಿಪಥ್ವಾಯು ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಹೆಚ್ಚಿನ ವಿವರ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಲೀಗ್ ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ನಾವು ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
ಅಗ್ನಿಪತ್ವಾಯು ಹೊಸ ನೇಮಕಾತಿ (indian air force recruitment 2025).?
ಭಾರತೀಯ ವಾಯುಪಡೆ ಇದೀಗ ಹೊಸ ಅಗ್ನಿಪಥ್ವಾಯು ಯೋಜನೆಯ ಮೂಲಕ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತೆ ಹಲವಾರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ ನಿಗಿದಿ ಮಾಡಲಾಗಿದೆ ಸೆಪ್ಟೆಂಬರ್ 25ರಂದು ಪರೀಕ್ಷೆಗಳು ಪ್ರಾರಂಭವಾಗಲಿ.

ಪ್ರಸ್ತುತ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಹಾಗಾಗಿ ನಾವು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ಅಗ್ನಿಪತ್ವಾಯು ಹುದ್ದೆಗಳ ನೇಮಕಾತಿ ವಿವರ..?
ನೇಮಕಾತಿ ಸಂಸ್ಥೆ:- ಭಾರತೀಯ ವಾಯುಪಡೆ
ಅರ್ಜಿ ಪ್ರಾರಂಭ ದಿನಾಂಕ:- 11/07/2025
ಅರ್ಜಿ ಕೊನೆಯ ದಿನಾಂಕ:- 31/07/2025
ಪರೀಕ್ಷೆಯ ದಿನಾಂಕ:- 25/08/2025
ಹುದ್ದೆಗಳ ಸಂಖ್ಯೆ:- ಅಧಿಸೂಚನೆಯಲ್ಲಿ ತಿಳಿಸಲಾಗಿದೆ
ಹುದ್ದೆಗಳ ಹೆಸರು:- ವಿವಿಧ ಹುದ್ದೆಗಳು
ಅಧಿಕೃತ ವೆಬ್ಸೈಟ್:- agnipathvayu.cdac.in
ಅಗ್ನಿಪಥ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಸ್ನೇಹಿತರೆ ಭಾರತೀಯ ವಾಯುಪಡೆ ಬಿಡುಗಡೆ ಮಾಡಿರುವ ಈ ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಾಲ್ಕು ವರ್ಷಗಳ ಅವಧಿಗೆ ವಾಯುಪಡೆ ಸೇರಲು ಅವಕಾಶ ಇರುತ್ತದೆ ನಂತರ ಕಾರ್ಯಕ್ಷಮತೆ ಹಾಗೂ ಇತರ ಆಧಾರಗಳ ಮೇಲೆ ಸೇವೆಯ ಅವಧಿಯನ್ನು ವಿಸ್ತರಣೆ ಮಾಡಬಹುದು ಅಥವಾ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚಿನ ಹಣವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಹಾಗಾಗಿ ಈ ಹುದ್ದೆಗಳ ನೇಮಕಾತಿ ಅರ್ಹತೆಗಳ ವಿವರವನ್ನು ತಿಳಿದುಕೊಳ್ಳೋಣ.
ಶೈಕ್ಷಣಿಕ ಅರ್ಹತೆ:-
ವಿಜ್ಞಾನ ವಿಭಾಗದಲ್ಲಿ:– ಬೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಹಾಗೂ ಇಂಗ್ಲೀಷ್ನೊಂದಿಗೆ 10+2 ತೇರ್ಗಡೆ. ವಿಭಾಗದಲ್ಲಿ ಕನಿಷ್ಠ 50% ಅಂಕ ಪಡೆದುಕೊಂಡು ಪಾಸ್ ಆಗಿರಬೇಕು ಹಾಗೂ ಇಂಗ್ಲಿಷ್ ನಲ್ಲಿ 50% ಅಂಕ ಪಡೆದಿರಬೇಕು ಅಥವಾ ಒಟ್ಟಾರೆ ಅಂಕಗಳಲ್ಲಿ ಕನಿಷ್ಠ 50% ನೊಂದಿಗೆ ಪಾಸಾಗಿರಬೇಕು ಹಾಗೂ ಇಂಗ್ಲಿಷ್ನಲ್ಲಿ 50% ಅಂಕ ಪಡೆದು ಮೂರು ವರ್ಷಗಳ ಕಾಲ ಇಂಜಿನಿಯರಿಂಗ್ ಡಿಪ್ಲೋಮೋ ಪೂರ್ಣಗೊಳಿಸಿರಬೇಕು
ವಿಜ್ಞಾನಿಯತರ ವಿಭಾಗಗಳಲ್ಲಿ:- ಇತರ ಯಾವುದೇ ವಿಷಯಗಳಲ್ಲಿ ಅಭ್ಯರ್ಥಿಗಳು 10+2 ತೇರ್ಗಡೆ ಆಗಿರಬೇಕು ಅಥವಾ ಒಟ್ಟು ವಿಷಯಗಳಲ್ಲಿ 50% ಅಂಕ ಪಡೆದಿರಬೇಕು ಹಾಗೂ ಇಂಗ್ಲಿಷ್ನಲ್ಲಿ 50% ಅಂಕಗಳು ಗಳಿಸಿರಬೇಕು ಅಥವಾ ಇತರ ಯಾವುದೇ ಅಂಕಗಳ ಅವಶ್ಯಕತೆಯೊಂದಿಗೆ ಎರಡು ವರ್ಷಗಳ ಕಾಲ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಬೇಕು
ವಯೋಮಿತಿ ಎಷ್ಟು:- ಅಭ್ಯರ್ಥಿಗಳಿಗೆ ಕನಿಷ್ಠ 17.5 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ಗರಿಷ್ಠ 21 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಸರಕಾರದ ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ
ದೈಹಿಕ ಮಾನದಂಡಗಳು:– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 152.5 ಸೆಂ.ಮೀ ಎತ್ತರ ಹೊಂದಿರಬೇಕು ಹಾಗೂ ತೂಕ ಮತ್ತು ದೇಹದ ಅಳತೆಯ ಅನುಪಾತದಲ್ಲಿರಬೇಕು ಮತ್ತು ದೃಷ್ಟಿ ಮಾನದಂಡಗಳು ಹಾಗೂ ಶ್ರವಣ ಮಾನದಂಡಗಳು ಸಮರ್ಥಕವಾಗಿ ಕಾರ್ಯನಿರ್ವಹಿಸುತ್ತಿರಬೇಕು
ಅರ್ಜಿ ಶುಲ್ಕ ಎಷ್ಟು:– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ಅಭ್ಯರ್ಥಿಗಳಿಗೆ 550 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಇದರೊಂದಿಗೆ gst ಶುಲ್ಕ ಪಾವತಿಸಬೇಕು
ಅಗ್ನಿಪತ್ ವಾಯು ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು..?
ಸ್ನೇಹಿತರೆ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ಈ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಹೆಚ್ಚಿನ ವಿವರ ಪಡೆದುಕೊಳ್ಳಿ ಏಕೆಂದರೆ ಈ ಹುದ್ದೆಗಳಿಗೆ ನಾಲ್ಕು ವರ್ಷಗಳ ಅವಧಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಈ ಹುದ್ದೆಗಳಿಗೆ ಅಪ್ಲೈ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ಬಯಸುತ್ತಿದ್ದೀರಾ ಹಾಗಾದ್ರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
Ration Card Correction 2025: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ತಕ್ಷಣ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕ ಇದೆ.?