LIC Recruitment 2025: LIC ಹೊಸ ನೇಮಕಾತಿ 90,000 ದವರೆಗೆ ಸಂಬಳ.! ತಕ್ಷಣ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ಭಾರತೀಯ ಜೀವ ವಿಮಾ ನಿಗಮ (LIC) ಕೆಲಸ ಮಾಡಲು ಬಯಸುವಂಥವರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಸುಮಾರು 800 ಕ್ಕಿಂತ ಹೆಚ್ಚು ಸಹಾಯಕ ಆಡಳಿತ ಅಧಿಕಾರಿ (AAO) & ಸಹಾಯಕ ಇಂಜಿನಿಯರ್ (AE) ಮುಂತಾದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಲೇಖನ ಮೂಲಕ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬಹುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ಈ ಲೇಖನಿಯನ್ನು ಕೊನೆವರೆಗೂ ಓದಿ
ಎಲ್ ಐ ಸಿ ಹೊಸ ನೇಮಕಾತಿ 2025 (LIC Recruitment 2025 notification)..?
ಹೌದು ಸ್ನೇಹಿತರೆ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 841 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇದೀಗ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ 08 ಸೆಪ್ಟೆಂಬರ್ 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಹಾಗಾಗಿ ಆಸಕ್ತಿ ಇರುವವರು ತಕ್ಷಣ ಅರ್ಜಿ ಸಲ್ಲಿಕೆ ಮಾಡಬಹುದು

ಹೌದು ಸ್ನೇಹಿತರೆ ಎಲ್ಐಸಿ ಬಿಡುಗಡೆ ಮಾಡಿರುವ ಈ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 90 ಸಾವಿರ ವರೆಗೆ ಹುದ್ದೆಗಳ ಅರ್ಹತೆ ಮೇರೆಗೆ ಸಂಬಳ ನೀಡಲಾಗುತ್ತಿದೆ ಹಾಗಾಗಿ ಎಲ್ಐಸಿಯಲ್ಲಿ ಉದ್ಯೋಗ ಹುಡುಕುತ್ತಿದ್ದವರಿಗೆ ಇದು ಸುವರ್ಣ ಅವಕಾಶ ಆದ್ದರಿಂದ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇನ್ನಷ್ಟು ವಿವರ ಪಡೆದುಕೊಳ್ಳೋಣ
ಖಾಲಿ ಹುದ್ದೆಗಳ ವಿವರ (LIC Recruitment 2025).?
ನೇಮಕಾತಿ ಸಂಸ್ಥೆ:- ಎಲ್ಐಸಿ
ಒಟ್ಟು ಹುದ್ದೆಗಳು:- 841 ಖಾಲಿ ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅರ್ಜಿ ಪ್ರಾರಂಭ ದಿನಾಂಕ:- 08/08/2025
ಅರ್ಜಿ ಕೊನೆಯ ದಿನಾಂಕ:- 08/09/2025
ಖಾಲಿ ಹುದ್ದೆಗಳ ವಿವರ:-
1) ಸಹಾಯಕ ಇಂಜಿನಿಯರ್ (AE) :- 81 ಹುದ್ದೆಗಳು
2) ಸಹಾಯಕ ಆಡಳಿತ ಅಧಿಕಾರಿ (AAO):- 410 (ಸ್ಪೆಷಲಿಸ್ಟ್) ಹುದ್ದೆಗಳು
3) ಸಹಾಯಕ ಆಡಳಿತ ಅಧಿಕಾರಿ:- 350 (ಜನರಲಿಸ್ಟ್) ಹುದ್ದೆಗಳು
ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (LIC Recruitment 2025 eligibility).?
ಶೈಕ್ಷಣಿಕ ಅರ್ಹತೆ:- ಎಲ್ಐಸಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಹುದ್ದೆಗಳ ಅನುಗುಣವಾಗಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು B.E & B.Tech, ಮತ್ತು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದರೆ ಅರ್ಜಿ ಸಲ್ಲಿಕೆ ಮಾಡಬಹುದು
ಸಂಬಳ ಎಷ್ಟು:- ಎಲ್ಐಸಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಕನಿಷ್ಠ ₹25,710 ರೂಪಾಯಿಯಿಂದ ₹90,710 ರೂಪಾಯಿಗಳವರೆಗೆ ಸಂಬಳ ಹುದ್ದೆಗಳ ಅನುಗುಣವಾಗಿ ನೀಡಲಾಗುತ್ತದೆ
ವಯೋಮಿತಿ ಎಷ್ಟು:- ಎಲ್ಐಸಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ 32 ವರ್ಷ ನಿಗದಿ ಮಾಡಲಾಗಿದೆ ಹಾಗೂ ಮೀಸಲಾತಿ ಆಧಾರಗಳ ಮೇಲೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಅರ್ಜಿ ಶುಲ್ಕ:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ₹85 ರೂಪಾಯಿ ಅರ್ಜಿ ಶುಲ್ಕನಿಗಿದೆ ಮಾಡಲಾಗಿದೆ ಇದರ ಜೊತೆಗೆ ಟ್ರಾನ್ಸಾಕ್ಷನ್ ಶುಲ್ಕ ಮತ್ತು GST ಒಳಗೊಂಡಿರುತ್ತದೆ ಹಾಗೂ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ₹700/- ಅರ್ಜಿ ಶುಲ್ಕ ನಿಗದಿ ಮಾಡಲಾಗಿರುತ್ತದೆ ಹಾಗೂ ಹೆಚ್ಚುವರಿಗಾಗಿ ಟ್ರಾನ್ಸಾಕ್ಷನ್ ಶುಲ್ಕ ಮತ್ತು GST ಒಳಗೊಂಡಿರುತ್ತದೆ
ಖಾಲಿ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು (how Apply Online LIC Jobs).?
ಸ್ನೇಹಿತರೆ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ಎಲ್ಐಸಿ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ಗೆ ಕ್ಲಿಕ್ ಮಾಡುವುದರ ಮೂಲಕ ತುಂಬಾ ಸುಲಭವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು
ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು