LIC Scholarship 2025 – LIC ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ 40,000 ವರೆಗೆ ವಿದ್ಯಾರ್ಥಿವೇತನ.! ಬೇಗ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಮತ್ತು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್ ಮತ್ತು ಇತರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೀಗ ಭಾರತೀಯ ಜೀವ ವಿಮೆ ನಿಗಮ (LIC) ಇದೀಗ ವಿದ್ಯಾರ್ಥಿಗಳಿಗೆ ಬರೋಬ್ಬರಿ 40,000 ವರೆಗೆ ವಿದ್ಯಾರ್ಥಿ ವೇತನ ನೀಡುವ ಸ್ಕಾಲರ್ಶಿಪ್ ಯೋಜನೆ ಜಾರಿಗೆ ತಂದಿದೆ ಹಾಗಾಗಿ ನಾವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿಗಳತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಲೇಖನೆಯನ್ನು ಕೊನೆವರೆಗೂ ಓದಿ
ಎಲ್ ಐ ಸಿ ವಿದ್ಯಾರ್ಥಿವೇತನ (LIC Scholarship 2025).?
ಸ್ನೇಹಿತರೆ ನಮ್ಮ ದೇಶದ ಅತ್ಯಂತ ದೊಡ್ಡ ವಿಮಾ ಕಂಪನಿ ಯಾವುದು ಎಂದರೆ ಅದು ಎಲ್ಐಸಿ. ಹೌದು ಸ್ನೇಹಿತರೆ ಈ ಒಂದು ಸಂಸ್ಥೆ ಭಾರತದ ಅತ್ಯಂತ ದೊಡ್ಡ ಜೀವ ವಿಮೆ ಕಂಪನಿ ಹಾಗೂ ಸರಕಾರದ ಒಡೆತನದಲ್ಲಿರುವ ಸಂಸ್ಥೆಯಾಗಿದೆ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಹಾಗೂ ಉನ್ನತ ಶಿಕ್ಷಣ ಪಡೆಯಲು ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ವೇತನ ಪರಿಚಯ ಮಾಡಿದೆ.

ಹೌದು ಸ್ನೇಹಿತರೆ ಭಾರತೀಯ ಜೀವ ವಿಮೆ (LIC) ಸಂಸ್ಥೆ ತನ್ನ ಫೌಂಡೇಶನ್ ಮೂಲಕ ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನ ಆರಂಭ ಮಾಡಿದೆ ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಸುಮಾರು 40 ಸಾವಿರ ವರೆಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣ ನೀಡಲಾಗುತ್ತದೆ ಹಾಗಾಗಿ ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿನ ತಿಳಿದುಕೊಳ್ಳೋಣ ಹಾಗೂ ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ ಎಂಬ ವಿವರವನ್ನು ತಿಳಿದುಕೊಳ್ಳೋಣ
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ಸಿಗುತ್ತೆ ಹಾಗೂ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು..?
ಇಂಜಿನಿಯರಿಂಗ್ ಕೋರ್ಸ್ ಗಳು:– ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನದ ಮೂಲಕ ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರು ತಿಂಗಳಿಗೆ 15000 ಹಾಗೂ ವರ್ಷಕ್ಕೆ ರೂ.30,000 ಸ್ಕಾಲರ್ಶಿಪ್ ಎರಡು ಕಂತಿನ ರೂಪದಲ್ಲಿ ಸಿಗುತ್ತದೆ.
ವೈದ್ಯಕೀಯ ಕೋರ್ಸ್ ಗಳು: ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನದ ಮೂಲಕ ವಿದ್ಯಾರ್ಥಿಗಳಿಗೆ ಆರು ತಿಂಗಳಿಗೆ 20,000 ಹಾಗೂ ವರ್ಷಕ್ಕೆ ರೂ. 40,000 ಎರಡು ಕಂತಿನ ರೂಪದಲ್ಲಿ ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಸ್ಕಾಲರ್ಶಿಪ್ ಹಣ ಪಡೆಯಬಹುದು
ಇತರೆ ವಿಭಾಗದ ವಿದ್ಯಾರ್ಥಿಗಳಿಗೆ:- ಹೌದು ಗೆಳೆಯರೇ ಡಿಪ್ಲೋಮೋ, ಐಟಿಐ, ಪಿಯುಸಿ ಹಾಗೂ ಪದವಿ ಮತ್ತು ಇತರ ಯಾವುದೇ ವೃತ್ತಿಪರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನದ ಮೂಲಕ ಆರು ತಿಂಗಳಿಗೆ 10000 ಹಾಗೂ ವರ್ಷಕ್ಕೆ ರೂ 20,000 ಹಣ ಸ್ಕಾಲರ್ಶಿಪ್ ಮೂಲಕ ಪಡೆಯಬಹುದು
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್ಶಿಪ್ ಯೋಜನೆ (LIC Scholarship 2025).?
ಹೌದು ಸ್ನೇಹಿತರೆ ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನದ ಮೂಲಕ ವಿಶೇಷವಾಗಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಹಿಳಾ ವಿಭಾಗದ ವಿದ್ಯಾರ್ಥಿನಿಯರಿಗೆ ಈ ಒಂದು ಸ್ಕಾಲರ್ಶಿಪ್ ಯೋಜನೆಯ ಮೂಲಕ ಆರು ತಿಂಗಳಿಗೆ ರೂ.7500 ಹಾಗೂ ವರ್ಷಕ್ಕೆ 15000 ವಿದ್ಯಾರ್ಥಿ ವೇತನ ಅಥವಾ ಸ್ಕಾಲರ್ಶಿಪ್ ಹಣ ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಲು ಅವಕಾಶವಿರುತ್ತದೆ ಹಾಗಾಗಿ ಮಹಿಳಾ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಬೇಗ ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (LIC Scholarship 2025 eligibility criteria).?
- ವಿದ್ಯಾರ್ಥಿಗಳು ಭಾರತದ ನಿವಾಸಿಗಳಾಗಿರಬೇಕು
- ವಿದ್ಯಾರ್ಥಿಗಳು ಪ್ರಸ್ತುತ 2025 ಮತ್ತು 26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೋಮೋ, ಪದವಿ, ಇಂಜಿನಿಯರಿಂಗ್, ವೈದ್ಯಕೀಯ, ಮತ್ತು ಇತರ ಯಾವುದೇ ವೃತ್ತಿಪರ ಪದವಿ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರಬೇಕು
- ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಬಯಸುವ ವಿದ್ಯಾರ್ಥಿಗಳ ಪೋಷಕರ ಕುಟುಂಬದ ವಾರ್ಷಿಕ ಆದಾಯ 4.50 ಲಕ್ಷ ರೂಪಾಯಿ ಗಿಂತ ಕಡಿಮೆ ವರ್ಷಕ್ಕೆ ಆದಾಯ ಹೊಂದಿರಬೇಕು
- ವಿದ್ಯಾರ್ಥಿಗಳು ಇಂದಿನ ತರಗತಿಯಲ್ಲಿ ಕನಿಷ್ಠ 60% ಗಿಂತ ಹೆಚ್ಚಿನ ಅಂಕ ಪಡೆದು ಪಾಸ್ ಆಗಿರಬೇಕು
ಅರ್ಜಿ ಸಲ್ಲಿಸುವುದು ಹೇಗೆ (How To Apply online for LIC Scholarship 2025).?
ಸ್ನೇಹಿತರೆ ನೀವು ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದೀರಾ, ಹಾಗಾದ್ರೆ ಮೊದಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಈ ಒಂದು ವಿದ್ಯಾರ್ಥಿ ವೇತನಕ್ಕೆ 06 ಅಕ್ಟೋಬರ್ 2025 ರ ಒಳಗಡೆ ನೀವು ಅರ್ಜಿ ಸಲ್ಲಿಕೆ ಮಾಡಬೇಕು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ (LIC Scholarship 2025 last date).?
ಹೌದು ಗೆಳೆಯರೇ ನೀವು ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದಾರೆ ಆದಷ್ಟು ಕೊನೆಯ ದಿನಾಂಕದ ಒಳಗಡೆ ಅಂದರೆ ಆರು ಅಕ್ಟೋಬರ್ 2025 ರ ಒಳಗಡೆ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ ಹಾಗೂ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06/10/2025
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ವಿಷಯ ತಿಳಿಯಲು ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ಆಸಕ್ತಿ ಇದ್ದರೆ
ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು
BSSC Recruitment 2025 – ಹತ್ತನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಕ್ಷಣ ಅಪ್ಲೈ ಮಾಡಿ