New Ration Card – ಹೊಸ ಪಡಿತರ ಚೀಟಿ ಅರ್ಜಿ ಯಾವಾಗ ಪ್ರಾರಂಭ.? ಪಡಿತರ ಚೀಟಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.?
ಗೆಳೆಯರೇ ತುಂಬಾ ಜನರಿಗೆ ಹೊಸ ರೇಷನ್ ಕಾರ್ಡ್ ಅಥವಾ ಹೊಸ ಪಡಿತರ ಚೀಟಿ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ ತುಂಬಾ ಜನರು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದಂತ ಕೆಎಚ್ ಮುನಿಯಪ್ಪನವರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿದುಕೊಳ್ಳೋಣ
ಹೊಸ ಪಡಿತರ ಚೀಟಿ ಅರ್ಜಿ ಕುರಿತು ಹೊಸ ಮಾಹಿತಿ (New Ration Card)..?
ಹೌದು ಗೆಳೆಯರೇ ಉಡುಪಿಯಲ್ಲಿ ಸುದ್ದಿಗೋಷ್ಠಿನಲ್ಲಿ ಕೆಎಚ್ ಮುನಿಯಪ್ಪನವರು ಹೊಸ ಪಡಿತರ ಚೀಟಿ ಅರ್ಜಿಗೆ ಕುರಿತು ಹೊಸ ಮಾಹಿತಿ ನೀಡಿದ್ದಾರೆ. ಹೌದು ಗೆಳೆಯರೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSM) ಅಡಿಯಲ್ಲಿ ಇತ್ತೀಚಿಗೆ ಒಂದು ಸಮೀಕ್ಷೆ ಮಾಡಲಾಯಿತು, ಈ ಸಮೀಕ್ಷೆ ವೇಳೆ ಸುಮಾರು 7.70 ಲಕ್ಷಕ್ಕಿಂತ ಹೆಚ್ಚು ಪಡಿತರ ಚೀಟಿಗಳು ಅನರ್ಹ ಎಂದು ಗುರುತಿಸಲಾಗಿದೆ. ಹಾಗಾಗಿ ನಮ್ಮ ಕರ್ನಾಟಕದಲ್ಲಿ ಸುಮಾರು 7.70 ಲಕ್ಷ ಪಡಿತರ ಚೀಟಿಗಳನ್ನು ಬಿಪಿಎಲ್ ರೇಷನ್ ಕಾರ್ಡ್ ನಿಂದ ಎಪಿಎಲ್ ರೇಷನ್ ಕಾರ್ಡಿಗೆ ಬದಲಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.

ಇಂದಿನ ಸರ್ಕಾರಗಳು ಯಾವುದೇ ರೀತಿ ಪರಿಶೀಲನೆ ಇಲ್ಲದೆ ಜನರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಆದ್ದರಿಂದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಅಂದರೆ ನಮ್ಮ ಪಕ್ಕದ ತೆಲಂಗಾಣ ಮತ್ತು ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ರಾಜ್ಯದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಶೇಕಡ 50ರಷ್ಟು ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಆದರೆ ನಮ್ಮ ರಾಜ್ಯದಲ್ಲಿ ಶೇಕಡ 75ಕ್ಕಿಂತ ಹೆಚ್ಚಿನ ನಾಗರಿಕರಿಗೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ .
ಹೌದು ಗೆಳೆಯರೇ ನಮ್ಮ ರಾಜ್ಯದಲ್ಲಿ 7.70 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ ಈ ರೇಷನ್ ಕಾರ್ಡ್ ರದ್ದು ಪ್ರಕ್ರಿಯೆ ಈಗಾಗಲೇ ಪ್ರಾರಂಭ ಮಾಡಲಾಗಿದೆ ಹಾಗಾಗಿ ಈ ರದ್ದು ಪ್ರಕ್ರಿಯೆ ಮುಗಿದ ನಂತರ ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ ಅರ್ಜಿ ಹಾಕಲು ಇದೇ ನವಂಬರ್ ತಿಂಗಳಿನಲ್ಲಿ ಅವಕಾಶ ಮಾಡಿಕೊಡುತ್ತದೆ ಎಂದು ಕೆಎಚ್ ಮುನಿಯಪ್ಪನವರ ಮಾಹಿತಿ ಹಂಚಿಕೊಂಡಿದ್ದಾರೆ
ಹಾಗಾಗಿ ಹೊಸ ರೇಷನ್ ಕಾರ್ಡ್ ಪಡೆಯಲು ಬಯಸುವವರು ಈ ಕೆಳಗಿನ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಕೆಳಗಡೆ ನೀಡಿದ ಎಲ್ಲಾ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ನಂತರ ಹೊಸ ಪಡಿತರ ಚೀಟಿ ಅರ್ಜಿ ಪ್ರಾರಂಭವಾದ ತಕ್ಷಣ ಅರ್ಜಿ ಸಲ್ಲಿಸಿ
ಹೊಸ ಪಡಿತರ ಚೀಟಿ ಪಡೆಯಲು ಹೊಂದಿರಬೇಕಾದ ಅರ್ಹತೆಗಳು (New Ration Card Apply eligibility criteria).?
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
- ಅರ್ಜಿದಾರರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದರೆ ಮಾತ್ರ ಹೊಸ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅವಕಾಶವಿರುತ್ತದೆ ಮತ್ತು ಉಳಿದವರಿಗೆ ಎಪಿಎಲ್ ಪಡಿತರ ಚೀಟಿ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ
- ಅರ್ಜಿದಾರರು ನವದಂಪತಿಗಳು ಆಗಿದ್ದರೆ ಅಥವಾ ಇತ್ತೀಚಿಗೆ ಮದುವೆ ಆಗಿದ್ದರೆ ಅಂತವರು ಹಾಗೂ ಪಡಿತರ ಚೀಟಿ ಹೊಂದದೆ ಇರುವಂತ ಕುಟುಂಬಗಳು ಹಾಗೂ ಅರ್ಹ ಕುಟುಂಬಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಅರ್ಜಿದಾರರು 7.5 ಎಕರೆಗಿಂತ ಕಡಿಮೆ ಭೂಮಿ ಅಥವಾ ಜಮೀನು ಹೊಂದಿರಬೇಕು ಹಾಗೂ ಇತರ ಮಾರ್ಗಸೂಚಿಗಳನ್ನು ಅರ್ಜಿದಾರರು ಪಾಲಿಸಬೇಕಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (New Ration Card Application Documents).?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಹೊಸ ಪಡಿತರ ಚೀಟಿ ಅರ್ಜಿ ಯಾವಾಗ ಪ್ರಾರಂಭವಾಗಬಹುದು (New Ration Card).?
ಸ್ನೇಹಿತರೆ ನಮ್ಮ ಆಹಾರ ಇಲಾಖೆ ಸಚಿವರಾದ ಕೆ ಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ 01 ಅಕ್ಟೋಬರ್ 2025 ರಿಂದ ಹೊಸ ಅರ್ಜಿ ಪ್ರಾರಂಭವಾಗಬೇಕಿತ್ತು, ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.
ಹಾಗಾಗಿ ಅಕ್ಟೋಬರ್ ಎರಡನೇ ವಾರದಲ್ಲಿ ಅಥವಾ ನವೆಂಬರ್ ತಿಂಗಳ ಮೊದಲ ದಿನದಿಂದ ಹೊಸ ಪಡಿತರ ಚೀಟಿ ಅರ್ಜಿ ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೆಲವೊಂದು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭವಾದ ತಕ್ಷಣ ನಾವು ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರು ಸೇರಿಕೊಳ್ಳಬಹುದು
ಅರ್ಜಿ ಸಲ್ಲಿಸುವುದು ಹೇಗೆ (How To Apply online for New Ration Card).?
ಸ್ನೇಹಿತರ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾದ ತಕ್ಷಣ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಇತರ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ನೀವು ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭವಾದ ತಕ್ಷಣ ನಾವು ವಾಟ್ಸಪ್ ಮತ್ತು ಟೆಲಿಗ್ರಾಂ ಚಾನಲ್ಗಳಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ತಕ್ಷಣ ಪ್ರತಿಯೊಬ್ಬರು ಸೇರಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ:- ಇಲ್ಲಿ ಕ್ಲಿಕ್ ಮಾಡಿ
ಸಹಾಯವಾಣಿ ಸಂಖ್ಯೆ: 1800-425-9339
ಸ್ನೇಹಿತರೆ ಈ ಮಾಹಿತಿಯನ್ನು ಆದಷ್ಟು, ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಕುಟುಂಬದವರಿಗೆ ಮತ್ತು ಇತರರಿಗೆ ಶೇರ್ ಮಾಡಿ