ಪಿಎಂ ಆವಾಸ್ ಯೋಜನೆ: ಕೇಂದ್ರ ಸರ್ಕಾರದಿಂದ (PM Aawas Yojana) ಉಚಿತ ಮನೆ ನಿರ್ಮಾಣ ಮಾಡಲು 2.67 ಲಕ್ಷದವರೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾದಂತ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಇದೀಗ ದೇಶದ ಜನರಿಗೆ ಸಿಹಿ ಸುದ್ದಿ ನೀಡಲಾಗಿದೆ.
ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆಯ ಮೂಲಕ ಮನೆ ಇಲ್ಲದಂತ ಕುಟುಂಬಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಂತ ಕುಟುಂಬಗಳಿಗೆ ಮತ್ತು ಸ್ವಂತ ಮನೆ ಕಟ್ಟಿಸಲು ಬಯಸುವಂತಹ ಕುಟುಂಬಗಳಿಗೆ ಇದೀಗ ಮನೆ ನಿರ್ಮಾಣಕ್ಕಾಗಿ 2.67 ಲಕ್ಷ ರೂಪಾಯಿವರೆಗೆ ಆರ್ಥಿಕ ಸಹಾಯ ಧನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ
ಆದ್ದರಿಂದ ನಾವು ಈ ಲೇಖನೆಯ ಮೂಲಕ ಪಿಎಂ ಆವಾಸ್ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯೋಣ
ಪಿಎಂ ಆವಾಸ್ ಯೋಜನೆಯ ವಿವರಗಳು..?
ಕೇಂದ್ರ ಸರಕಾರ ಪಿಎಂ ಆವಾಸ್ ಯೋಜನೆಯನ್ನು ಬಡ ಮತ್ತು ಮಾಧ್ಯಮ ವರ್ಗದವರಿಗೆ ಹಾಗೂ ವಾಸ ಮಾಡಲು ಮನೆ ಇಲ್ಲದಂತ ಕುಟುಂಬಗಳಿಗೆ ಮತ್ತು ಗುಡಿಸಲು ವಾಸ ಮಾಡುವ ಜನರಿಗಾಗಿ ಮನೆ ನಿರ್ಮಾಣ ಮಾಡಲು ಸರ್ಕಾರ ಕಡೆಯಿಂದ ಸಹಾಯಧನ ನೀಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಪಿಎಂ ಆವಾಸ್ ಯೋಜನೆ ಮೂಲಕ ಇಲ್ಲಿವರೆಗೂ 92.61 ಲಕ್ಷಕಿಂತ ಹೆಚ್ಚು ಮನೆಗಳು ನಿರ್ಮಾಣ ಮಾಡಲಾಗಿದೆ

ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆಯ ಪ್ರಮುಖ ಗುರಿ ಏನೆಂದರೆ, ಈ ಒಂದು ಯೋಜನೆ ಅಡಿಯಲ್ಲಿ ಮುಂದೆ ಬರುವಂತ ಮೂರು ವರ್ಷಗಳಲ್ಲಿ ಸುಮಾರು ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ನಮ್ಮ ದೇಶದ ಆರ್ಥಿಕ ಸಚಿವರಾದಂತಹ ನಿರ್ಮಲ ಸೀತಾರಾಮನ್ ಅವರು ಮಾಹಿತಿ ತಿಳಿಸಿದ್ದಾರೆ ಅದೇ ರೀತಿ ಇದೀಗ ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ
ಪಿಎಂ ಆವಾಸ್ ಯೋಜನೆಯ ವಿಭಾಗಗಳು ವಿವರ ಈ ರೀತಿಯಾಗಿದೆ..?
ಪಿಎಂ ಆವಾಸ್ ಯೋಜನೆ ನಗರ (PMAY-URBAN):- ಈ ಒಂದು ಯೋಜನೆಯನ್ನು ನಗರ ಪ್ರದೇಶದಲ್ಲಿ ವಾಸ ಮಾಡುವಂತ ಜನರಿಗೆ ಹಾಗೂ ಮಾಧ್ಯಮ ವರ್ಗದ ಜನರಿಗೆ ಮತ್ತು ಬಡ ಕುಟುಂಬಗಳಿಗೆ ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವಂಥ ಜನರಿಗೆ ಮನೆ ನಿರ್ಮಾಣ ಮಾಡಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಮೊದಲನೇ ಭಾಗವಾಗಿ ವಿಂಗಡನೆ ಮಾಡಲಾಗಿದೆ
PM ಆವಾಸ್ ಯೋಜನೆ ಗ್ರಾಮೀಣ (PMAY-GRAMIN):- ಈ ಒಂದು ಯೋಜನೆಯ ಎರಡನೇ ಭಾಗವಾಗಿ ಪಿಎಂ ಆವಾಸ್ ಯೋಜನೆ ಗ್ರಾಮೀಣ ಎಂದು ವಿಂಗಡನೆ ಮಾಡಲಾಗಿದೆ ಈ ಒಂದು ಯೋಜನೆಯ ಮೂಲಕ ಹಳ್ಳಿಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ವಾಸ ಮಾಡುವಂತಹ ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ಮತ್ತು ಮನೆ ಇಲ್ಲದಂತ ಜನರಿಗೆ ಈ ಯೋಜನೆಯ ಮೂಲಕ ಉಚಿತ ಮನೆ ನಿರ್ಮಾಣ ಮಾಡಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಎರಡನೇ ಭಾಗವಾಗಿ ವಿಂಗಡನೆ ಮಾಡಲಾಗಿದೆ
ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?
ಈ ಯೋಜನೆಯ ಮೂಲಕ ಉಚಿತ ಮನೆ ನಿರ್ಮಾಣಕ್ಕಾಗಿ ಸರಕಾರದಿಂದ ಆರ್ಥಿಕ ಸಹಾಯಧನ ಪಡೆಯಬೇಕಾದರೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವರ್ಗಗಳ ಅನುಗುಣವಾಗಿ 1.20 ಲಕ್ಷ ರೂಪಾಯಿಯಿಂದ ಗರಿಷ್ಠ 18 ಲಕ್ಷ ರೂಪಾಯಿ ಒಳಗಡೆ ಇರಬೇಕಾಗುತ್ತದೆ ಹಾಗಾಗಿ ಹೆಚ್ಚಿನ ವಿವರಕ್ಕಾಗಿ ಪಿಎಂ ಆವಾಸ್ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಉಚಿತ ಮನೆ ಪಡೆದುಕೊಳ್ಳಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ನಮ್ಮ ಭಾರತದ ನಿವಾಸಿಗಳಾಗಿರಬೇಕು
ಪ್ರಸ್ತುತ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ
ಉಚಿತ ಮನೆ ಪಡೆಯಲು ಬಯಸುವ ಅರ್ಜಿದಾರರು ಈ ಹಿಂದೆ ಸರಕಾರದ ಯಾವುದೇ ಯೋಜನೆಯಿಂದ ಮನೆ ಕಟ್ಟಿಸಲು ಆರ್ಥಿಕ ನೆರವು ಪಡೆದಿರಬಾರದು
ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಲು ಬಯಸುವ ಅರ್ಜಿದಾರರ ಮನೆಯ ಗಾತ್ರ 200 ಚದರ ಮೀಟರ್ ಇರಬೇಕು
ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅಗತ್ಯ ದಾಖಲಾತಿಗಳು..?
ಅರ್ಜಿದಾರರ ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಮೊಬೈಲ್ ನಂಬರ್
ಪ್ಲಾಟ್ ಅಥವಾ ನಿವೇಶನ ನಿರ್ಮಾಣದ ಪ್ರಮಾಣ ಪತ್ರ
ವಸತಿ ರಹಿತ ಪ್ರಮಾಣ ಪತ್ರ
ಇತರೆ ಅಗತ್ಯ ದಾಖಲಾತಿಗಳು
ಪಿಎಂ ಆವಾಸ್ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು..?
ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಲು ನೀವು ಬಯಸುತ್ತಿದ್ದೀರಾ ಹಾಗಾದರೆ ನಾವು ಕೆಳಗಡೆ ಎರಡು ಲಿಂಕ್ ನೀಡಿದ್ದೇವೆ ಅದನ್ನು ಬಳಸಿಕೊಂಡು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ
ಪಿಎಂ ಆವಾಸ್ ಯೋಜನೆ ನಗರ:-
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಆವಾಸ್ ಯೋಜನೆ ಗ್ರಾಮೀಣ:-
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿ ಪ್ರತಿದಿನ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
KEA Result 2025: PGNEET ಅಭ್ಯರ್ಥಿಗಳಿಗೆ ಗುಡ್ ನ್ಯೂಸ್.! ರಿಸಲ್ಟ್ ಬಿಡುಗಡೆ ಇಲ್ಲಿದೆ ನೋಡಿ ವಿವರ