Posted in

PM Kisan 21st Installment: ಪಿಎಂ ಕಿಸಾನ್ ಹಣ ಈ ದಿನ ಬಿಡುಗಡೆ.! ಆದರೆ ಈ ರೈತರಿಗೆ ಮೊದಲು 2000 ಹಣ ಜಮೆ

PM Kisan 21st Installment
PM Kisan 21st Installment

PM Kisan 21st Installment: ಪಿಎಂ ಕಿಸಾನ್ ಹಣ ಈ ದಿನ ಬಿಡುಗಡೆ.! ಆದರೆ ಈ ರೈತರಿಗೆ ಮೊದಲು 2000 ಹಣ ಜಮೆ 

ನಮಸ್ಕಾರ ಗೆಳೆಯರೇ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಪ್ರಕ್ರಿಯೆ ಈಗಾಗಲೇ ಆರಂಭ ಮಾಡಿದೆ ಆದರೆ ಕೇಂದ್ರ ಸರ್ಕಾರ ಇದೀಗ ತನ್ನ ದಾರಿಯನ್ನೇ ಬದಲಾಯಿಸಿದೆ. ಹೌದು ಗೆಳೆಯರೇ ಇಲ್ಲಿವರೆಗೂ ಎಲ್ಲಾ ರೈತರ ಖಾತೆಗೆ ಒಂದೇ ದಿನ ಹಣ ಬಿಡುಗಡೆ ಮಾಡಲಾಗುತ್ತಿತ್ತು ಆದರೆ ಇದೀಗ ಪ್ರಪ್ರಥಮ ಬಾರಿಗೆ ಮೋದಿ ಸರ್ಕಾರ ಕಡೆಯಿಂದ ಈ ನಿಯಮ ಬ್ರೇಕ್ ಮಾಡಲಾಗಿದೆ.

ಈ ಲೇಖನ ಮೂಲಕ ನಾವು ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಯಾವಾಗ ರೈತರ ಖಾತೆಗೆ ಜಮಾ ಆಗುತ್ತದೆ ಹಾಗೂ ಯಾವ ರೈತರಿಗೆ ಮೊದಲು ಹಣ ಬಿಡುಗಡೆಯಾಗುತ್ತದೆ ಮತ್ತು ಹಣ ಬಿಡುಗಡೆ ಮಾಡಲು ಕಾರಣ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಏನಿದು ಪಿಎಂ ಕಿಸಾನ್ ಯೋಜನೆ (PM Kisan 21st Installment).?

ಸ್ನೇಹಿತರ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಹಾಗೂ ರೈತರಿಗೆ ಸರಿಯಾದ ಸಮಯದಲ್ಲಿ ಅಂದರೆ ರೈತರಿಗೆ ಬೀಜ ಹಾಗೂ ಗೊಬ್ಬರ ಮತ್ತು ಇತರೆ ಕೃಷಿ ಖರ್ಚುಗಳಿಗೆ ನಿಭಾಯಿಸಲು ಕೇಂದ್ರ ಸರಕಾರ ಕಡೆಯಿಂದ ಅಥವಾ ಸರಕಾರ ಕಡೆಯಿಂದ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ 2019 ರಲ್ಲಿ ಪಿಎಂ ಕಿಸಾನ್ ಯೋಜನೆ ಜಾರಿಗೆ ತರಲಾಯಿತು.

PM Kisan 21st Installment
PM Kisan 21st Installment

 

ಈ ಯೋಜನೆ ಮೂಲಕ ಅರ್ಹ ರೈತರ ಖಾತೆಗೆ ವರ್ಷಕ್ಕೆ ₹6,000/- ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಯೋಜನೆಯಾಗಿದೆ. ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಮೂಲಕ ರೈತರಿಗೆ ಮೂರು ಕಂತಿನ ರೂಪದಲ್ಲಿ ಅಂದರೆ ಪ್ರತಿ ರೂ.2000 ಯಂತೇ ಒಂದು ವರ್ಷಕ್ಕೆ ಒಟ್ಟು 6,000 ಹಣ ಈ ಒಂದು ಯೋಜನೆಯ ಮೂಲಕ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

 

ಈ ಭಾಗದ ರೈತರಿಗೆ ಈಗಾಗಲೇ ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ (PM Kisan 21st Installment).?

ಹೌದು ಗೆಳೆಯರೇ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಈಗಾಗಲೇ ರೈತರ ಖಾತೆಗೆ ಬಿಡುಗಡೆ ಮಾಡಲಾಗಿದೆ. ಹೌದು ಗೆಳೆಯರೇ ಪ್ರಪ್ರಥಮ ಬಾರಿಗೆ ಕೇಂದ್ರ ಸರಕಾರ ಎಲ್ಲಾ ರೈತರ ಖಾತೆಗೆ ಒಂದೇ ಸಾಲಿಗೆ ಹಣ ಜಮಾ ಮಾಡುವ ನಿಯಮವನ್ನು ಬ್ರೇಕ್ ಮಾಡಿದೆ, ಹೌದು ಗೆಳೆಯರೇ ಈ ಹಿಂದೆ ಕೇಂದ್ರ ಸರ್ಕಾರ 20 ಕಂತುಗಳ ಹಣವನ್ನು ದೇಶದಾದ್ಯಂತ ರೈತರ ಖಾತೆಗೆ ಒಂದೇ ದಿನ ಜಮಾ ಮಾಡಿತ್ತು ಆದರೆ ಇದೀಗ 21ನೇ ಕಂತಿನ ಹಣ ಎಲ್ಲಾ ರೈತರ ಖಾತೆಗೆ ಒಂದೇ ದಿನ ಬಿಡುಗಡೆ ಮಾಡುವ ರೂಲ್ಸ್ ಬ್ರೇಕ್ ಮಾಡಿದೆ.

ಹೌದು ಗೆಳೆಯರೇ ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವನ್ನು ಪ್ರಕೃತಿ ವಿಕೋಪಕ್ಕೆ ತುತ್ತಾದ ರಾಜ್ಯದ ರೈತರ ಖಾತೆಗೆ ಮೊದಲು ಆದ್ಯತೆ ಈ ಸಲ ನೀಡಲಾಗಿದೆ ಅದೇ ರೀತಿ ಈ ಬಾರಿ ಪ್ರಕೃತಿ ವಿಕೋಪಕ್ಕೆ ಒಳಗಾದಂತ ರಾಜ್ಯದ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ.

WhatsApp Group Join Now
Telegram Group Join Now       

ಹೌದು ಗೆಳೆಯರೆ ಇತ್ತೀಚಿಗೆ ಜಮ್ಮು & ಕಾಶ್ಮೀರ ಹಾಗೂ ಲಡಕ್ ಭಾಗದ ರೈತರಿಗೆ ಖಾತೆಗೆ ಈಗಾಗಲೇ 21ನೇ ಕಂತಿನ 2000 ಅಕ್ಟೋಬರ್ 7 ನೇ ತಾರೀಖಿನಂದೆ ಅಲ್ಲಿನ ರೈತರ ಖಾತೆಗೆ ಜಮಾ ಮಾಡಲಾಗಿದೆ. ಹೌದು ಗೆಳೆಯರೆ ಜಮ್ಮು ಮತ್ತು ಕಾಶ್ಮೀರದ ಸುಮಾರು 8.5 ಲಕ್ಷ ರೈತರ ಖಾತೆಗೆ ಈಗಾಗಲೇ ಒಟ್ಟಾರೆ 170 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ ಇದರಿಂದ ಸಂಕಷ್ಟಕ್ಕೆ ಒಳಗಾದಂತ ರೈತರಿಗೆ ಸರಕಾರ ಕಡೆಯಿಂದ ಆಗಿದೆ ಹಾಗೂ ರೈತರಿಗೆ ಹೊಸ ಭರವಸೆ ನೀಡಲಾಗಿದೆ

 

ನಮ್ಮ ಕರ್ನಾಟಕದ ರೈತರಿಗೆ ಯಾವಾಗ ಹಣ ಬಿಡುಗಡೆ (PM Kisan 21st Installment)..?

ಹೌದು ಗೆಳೆಯರೇ ತುಂಬಾ ಜನರಿಗೆ ಕರ್ನಾಟಕ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ರೈತರ ಖಾತೆಗೆ ಹಣ ಯಾವಾಗ ಸಿಗುತ್ತೆ ಎಂದು ಯೋಚನೆ ಮಾಡುತ್ತಿರಬಹುದು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ರೀತಿ ಅಧಿಕೃತ ದಿನಾಂಕ ಮಾಡಿಲ್ಲ.

ಆದರೆ ಕೆಲವೊಂದು ಮಾಧ್ಯಮಗಳ ಮಾಹಿತಿಗಳ ಆಧಾರದ ಮೇಲೆ ನಮ್ಮ ಕರ್ನಾಟಕ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯದ ರೈತರ ಖಾತೆಗೆ ಶೀಘ್ರದಲ್ಲೇ ಜಮಾ ಆಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ.

ಹೌದು ಗೆಳೆಯರೆ ಈ ಹಿಂದೆ ಅಂದರೆ ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆಗೆ ಅಂದರೆ 5 ಅಕ್ಟೋಬರ್ 2024ರಂದು 16ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು ಅದೇ ರೀತಿ ಈ ವರ್ಷವೂ ಕೂಡ 20 ಅಕ್ಟೋಬರ್ 2025 ರ ಒಳಗಡೆ ಎಲ್ಲ ಅರ್ಹ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇದೆ.

ಒಟ್ಟಿನಲ್ಲಿ ಪಿಎಂ ಕಿಸಾನ್ ಯೋಜನೆ ಕೋಟ್ಯಾಂತರ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸಿದೆ ಎಂದು ಹೇಳಬಹುದು. ಹಾಗಾಗಿ ಈ ಒಂದು ಲೇಖನಿಯನ್ನು ಆದಷ್ಟು ರೈತರಿಗೆ ಶೇರ್ ಮಾಡಿ..

ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಭೇಟಿ ನೀಡಬಹುದು

ಬೆಳೆ ಪರಿಹಾರ: 30 ದಿನಗಳ ಒಳಗಡೆ ಬೆಳೆ ಪರಿಹಾರ ಬಿಡುಗಡೆ – ಕೃಷ್ಣ ಬೈರೇಗೌಡ

Leave a Reply

Your email address will not be published. Required fields are marked *