PM Kisan Update: ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ರೈತರು ಈ ಕೆಲಸ ಮಾಡಿ
ನಮಸ್ಕಾರ ಸ್ನೇಹಿತರೆ ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳೆ ಹಾಗಾದರೆ ನೀವು ಕಡ್ಡಾಯವಾಗಿ ಈ ಒಂದು ಮಾಹಿತಿಯನ್ನು ಪೂರ್ತಿಯಾಗಿ ಓದಿ ಏಕೆಂದರೆ ಕೇಂದ್ರ ಸರ್ಕಾರ ಇದೀಗ ಕೇಂದ್ರ ಕೃಷಿ ಇಲಾಖೆಯಿಂದ ಹೊಸ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ರೈತರು ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ 2000 ಹಣ ಪಡೆಯಲು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗಾಗಿ ನಾವು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
ಪಿಎಂ ಕಿಸನ್ 20ನೇ ಕಂತಿನ (PM Kisan Update) ಹಣ ಪಡೆಯಲು ಮಾಡಬೇಕಾದ ಕೆಲಸಗಳು..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣ ಪಡೆಯಲು ರೈತರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅಂತ ರೈತರಿಗೆ ಮಾತ್ರ 20ನೇ ಕಂತಿನ 2000 ಹಣ ಬಿಡುಗಡೆ ಮಾಡಲಾಗುತ್ತೆ ಎಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ

ಆದ್ದರಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ವಿವರವನ್ನು ನಾವು ಈಗ ತಿಳಿದುಕೊಳ್ಳೋಣ..
ಪಿಎಂ ಕಿಸನ್ ಅರ್ಜಿ Ekyc ಪೂರ್ಣಗೊಳಿಸಬೇಕು:- ಹೌದು ಸ್ನೇಹಿತರೆ ಇನ್ನೂ ಕೂಡ ತುಂಬಾ ರೈತರು ತಮ್ಮ ಪಿ ಎಮ್ ಕಿಸನ್ ಯೋಜನೆಯ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಹಾಗಾಗಿ ಕೂಡಲೇ ರೈತರು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ Ekyc ಪ್ರಕ್ರಿಯೆ ಪೂರ್ಣಗೊಳಿಸಿ
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್:- ಪಿಎಂ ಕಿಸಾನ್ ಯೋಜನೆಯ ಕೆಲ ಫಲಾನುಭವಿಗಳ ರೈತರ ಖಾತೆಗೆ ಇನ್ನೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ. ಆದ್ದರಿಂದ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಪಡೆಯಲು ಬಯಸುವ ರೈತರು ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ. ಒಂದು ವೇಳೆ ಲಿಂಕ್ ಆಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ
ಇದರ ಜೊತೆಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ಮತ್ತು ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಮತ್ತು ಅರ್ಜಿ ಸಲ್ಲಿಸಿದ ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು
ಮೊಬೈಲ್ ನಂಬರ್ ಅಪ್ಡೇಟ್:- ಹೌದು ಸ್ನೇಹಿತ್ರೆ, ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ರೈತರ ಅರ್ಜಿಗಳಿಗೆ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲ ಹಾಗಾಗಿ ಈ ಯೋಜನೆಗೆ ಸಂಬಂಧಿಸಿದೆ ಯಾವುದೇ ರೀತಿ ಅಪ್ಡೇಟ್ ಪಡೆಯಲು ನೀವು ಕಡ್ಡಾಯವಾಗಿ ಆಕ್ಟಿವ್ ಇರುವಂತಹ ಮೊಬೈಲ್ ನಂಬರ್ ಲಿಂಕ್ ಮಾಡಿ. ಇದನ್ನು ಮಾಡಿಸಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ
ಪಿಎಂ ಕಿಸಾನ್ ಅರ್ಜಿ ಸ್ಟೇಟಸ್ ಚೆಕ್ ಮಾಡಿ:– ಹೌದು ಸ್ನೇಹಿತರೆ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ ಹಾಗೂ ನಿಮ್ಮ ಹೆಸರು ಪಿಎಂ ಕಿಸನ್ 20ನೇ ಕಂತಿನ ಹಣ ಬಿಡುಗಡೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು
ಜಮೀನು ವಿವರಗಳ ಅಪ್ಡೇಟ್:- ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಅರ್ಜಿ ಸಲ್ಲಿಸಿದಂತ ಫಲಾನುಭವಿಯ ಜಮೀನು ಖಾತೆಯಲ್ಲಿ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ಮತ್ತು pm ಕಿಸಾನ್ ಯೋಜನೆ ಅರ್ಜಿಯಲ್ಲಿ ಹೆಸರು ಒಂದೇ ರೀತಿ ಇದೆ ಅಥವಾ ಇಲ್ಲ ಎಂಬ ಮಾಹಿತಿ ಚೆಕ್ ಮಾಡಿ ಒಂದು ವೇಳೆ ಇಲ್ಲದಿದ್ದರೆ ಸರಿಪಡಿಸಿಕೊಳ್ಳಿ
ವಿಶೇಷ ಸೂಚನೆ:- ಪಿಎಂ ಕಿಸನ್ ಯೋಜನೆಯ ಮೂಲಕ 19ನೇ ಕಂತಿನ ಹಣ ಪಡೆದುಕೊಂಡಂತ ರೈತರ ಎಲ್ಲಾ ದಾಖಲಾತಿಗಳು ಸರಿಯಾಗಿ ಇರುತ್ತವೆ ಹಾಗಾಗಿ ನೀವು ಏನು ಮಾಡುವ ಅವಶ್ಯಕತೆ ಇಲ್ಲ ಒಂದು ವೇಳೆ ನಿಮಗೆ ಪಿಎಂ ಕಿಸಾನ್ 19ನೇ ಕಂತಿನ ಹಣ ಬಂದಿಲ್ಲ ಅಂದರೆ ಮೇಲೆ ನೀಡಿದಂತ ಎಲ್ಲಾ ಮಾಹಿತಿಯನ್ನು ಸರಿಪಡಿಸಿಕೊಳ್ಳಿ
ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ
indian air force recruitment 2025: ಭಾರತೀಯ ವಾಯುಪಡೆ ಹೊಸ ನೇಮಕಾತಿ, 10Th ಪಾಸ್ ಆದವರು ಅರ್ಜಿ ಸಲ್ಲಿಸಿ