Railway Jobs; – PUC ಪಾಸಾದವರಿಗೆ (RRB) ರೈಲ್ವೆ ಮಂಡಳಿಯಲ್ಲಿ ಉದ್ಯೋಗ ಅವಕಾಶ.! ₹44000 ಸಂಬಳ, 434 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಮಸ್ಕಾರ ಗೆಳೆಯರೇ ರೈಲ್ವೆ ಮಂಡಳಿ ವತಿಯಿಂದ RRB Recruitment 2025 ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಈ ಒಂದು ಅಧಿಸೂಚನೆ ಪ್ರಕಾರ ಸುಮಾರು 434 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದ್ದು ಹಾಗಾಗಿ ನಾವು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಆದಷ್ಟು ಸ್ನೇಹಿತರಿಗೆ ಶೇರ್ ಮಾಡಿ
ರೈಲ್ವೆ ಇಲಾಖೆ ಹೊಸ ನೇಮಕಾತಿ (Railway Jobs).?
ಹೌದು ಸ್ನೇಹಿತರೆ, ಭಾರತೀಯ ರೈಲ್ವೆ ಮಂಡಳಿ ಇದೀಗ RRB ಮೂಲಕ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು ಈ ಒಂದು ಅಧಿಸೂಚನೆ ಪ್ರಕಾರ 434 ಹುದ್ದೆಗಳು ಖಾಲಿ ಇವೆ.! ಈ ಹುದ್ದೆಗಳು ನಮ್ಮ ದೇಶದ ವಿವಿಧ ರೈಲ್ವೆ ಇಲಾಖೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳು ಆಗಿವೆ. ಹಾಗಾಗಿ ಆಸಕ್ತಿ ಇರುವವರು ಮತ್ತು ಸರಕಾರಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು

ಆದ್ದರಿಂದ ಅರ್ಜಿ ಸಲ್ಲಿಸಬೇಕಾಗುವ ಅರ್ಹತೆಗಳು ಹಾಗೂ ಆಯ್ಕೆಯ ವಿಧಾನ ಹೇಗೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಸಂಬಳ ಎಷ್ಟು ಎಂಬ ವಿವರದ ಬಗ್ಗೆ ಈಗ ಮಾಹಿತಿ ತಿಳಿಯೋಣ
ರೈಲ್ವೆ ಹುದ್ದೆಗಳ ನೇಮಕಾತಿ ವಿವರ (Railway Jobs).?
ನೇಮಕಾತಿ ಸಂಸ್ಥೆ:- ಭಾರತೀಯ ರೈಲ್ವೆ ಮಂಡಳಿ (RRB)
ಖಾಲಿ ಹುದ್ದೆಗಳ ಸಂಖ್ಯೆ:- 434 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅರ್ಜಿ ಪ್ರಾರಂಭ ದಿನಾಂಕ:- 09/08/2025
ಅರ್ಜಿ ಕೊನೆಯ ದಿನಾಂಕ:- 18/09/2025
ಹುದ್ದೆಗಳ ಹೆಸರು:- ವಿವಿಧ ಹುದ್ದೆಗಳು
ಹುದ್ದೆಗಳ ವಿವರ:-
1) ನರ್ಸಿಂಗ್ ಸೂಪರಿಂಟೆಂಡೆಟ್:- 272 ಹುದ್ದೆಗಳು
2) ಡಯಾಲಿಸಿಸ್ ತಂತ್ರಜ್ಞ :- 04 ಹುದ್ದೆಗಳು
3) ಔಷಧಿಕಾರ (ಪ್ರವೇಶ ದರ್ಜೆ):- 105 ಹುದ್ದೆಗಳು
4) ಇಸಿಜಿ ತಂತ್ರಜ್ಞಾನ :- 04 ಹುದ್ದೆಗಳು
5) ಆರೋಗ್ಯ ಮತ್ತು ಮಲೇರಿಯ ನಿರೀಕ್ಷಕರು GR II:- 33 ಹುದ್ದೆಗಳು
6) ರೇಡಿಯೋಗ್ರಾಫರ್ X-ray ತಂತ್ರಜ್ಞ:- 04 ಹುದ್ದೆಗಳು
7) ಪ್ರಯೋಗಾಲಯ ಸಹಾಯಕ ದರ್ಜೆ II:- 12 ಹುದ್ದೆಗಳು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ಭಾರತೀಯ ರೈಲ್ವೆ ಮಂಡಳಿ (RRB) ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳ ಅನುಗುಣವಾಗಿ 12ನೇ ತರಗತಿ, ಡಿಪ್ಲೋಮೋ, ITI, ಪದವಿ, B.SC, B. ಫಾರ್ಮ ಮುಂತಾದ ವಿದ್ಯಾರ್ಹತೆ ಹೊಂದಿದವರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಸಂಬಳ ಎಷ್ಟು:- ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ಕನಿಷ್ಠ ₹21,700 ರೂಪಾಯಿಯಿಂದ ಗರಿಷ್ಠ ₹44,900 ರೂಪಾಯವರಿಗೆ ಸಂಬಳ ನೀಡಲಾಗುತ್ತದೆ ಇದರ ಜೊತೆಗೆ ಸರಕಾರದ ಬಡ್ತಿ ಮತ್ತು ಭತ್ಯೆ, ಹಾಗೂ ಪಿಂಚಣಿ ಮುಂತಾದ ಸೌಲಭ್ಯಗಳು ಪಡೆಯಬಹುದು ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಅರ್ಜಿ ಶುಲ್ಕ:- ಸ್ನೇಹಿತರೆ ರೈಲ್ವೆ ಮಂಡಳಿ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮಾಜಿ ಸೈನಿಕರು, PWBD ಅಭ್ಯರ್ಥಿಗಳು, ಮಹಿಳೆಯರು, SC/ST ಅಭ್ಯರ್ಥಿಗಳು ಮತ್ತು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ₹250/- ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಮತ್ತು ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ₹500/- ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಹಾಗೂ ಈ ಅರ್ಜಿ ಶುಲ್ಕ ಆನ್ಲೈನ್ ಮೂಲಕ ಪಾವತಿ ಮಾಡಬಹುದು
ಆಯ್ಕೆಯ ವಿಧಾನ:- ಭಾರತೀಯ ರೈಲ್ವೆ ಮಂಡಳಿ (RRB) ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ನಂತರ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮತ್ತು ಇತರ ವಿಧಾನಗಳನ್ನು ಆಧರಿಸಿ ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ (How To Apply online Railway Jobs).?
ಸ್ನೇಹಿತರೆ ನೀವು ಭಾರತೀಯ ರೈಲ್ವೆ ಮಂಡಳಿ ಬಿಡುಗಡೆ ಮಾಡಿರುವ RRB ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದರಲ್ಲಿರುವ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಾವು ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು
Today Gold Rate – ಇಂದು ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇಳಿಕೆ.?
