Posted in

Ration Card Cancelled: 12.5 ಲಕ್ಷಕ್ಕಿಂತ ಹೆಚ್ಚು BPL ಕಾರ್ಡ್ ರದ್ದು.! ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಈ ರೂಲ್ಸ್ ಪಾಲಿಸಿ

Ration Card Cancelled
Ration Card Cancelled

Ration Card Cancelled: 12.5 ಲಕ್ಷಕ್ಕಿಂತ ಹೆಚ್ಚು BPL ಕಾರ್ಡ್ ರದ್ದು.! ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಈ ರೂಲ್ಸ್ ಪಾಲಿಸಿ

ನಮಸ್ಕಾರ ಸ್ನೇಹಿತರೆ BPL ರೇಷನ್ ಕಾರ್ಡ್ ಹೊಂದಿದವರಿಗೆ ಇದೀಗ ರಾಜ್ಯ ಸರ್ಕಾರ ಶಾಕಿಂಗ್ ಸುದ್ದಿ ನೀಡಿದೆ..! ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಜನರು ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿದ್ದಾರೆ ಹಾಗೂ ಅರ್ಹತೆ ಇಲ್ಲದಿದ್ದರೂ ಕೂಡ ವಿವಿಧ ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಹಾಗಾಗಿ ಜನರಿಂದ ಇದೀಗ ಅನರ್ಹ ರೇಷನ್ ಕಾರ್ಡ್ ಗಳು ರದ್ದು ಮಾಡುವಂತೆ ಕೂಗು ಕೇಳಿ ಬರುತ್ತಿದೆ ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಇನ್ನಷ್ಟು ಹೆಚ್ಚಿನ ವಿವರ ಈಗ ತಿಳಿಯೋಣ

 

WhatsApp Group Join Now
Telegram Group Join Now       

ರೇಷನ್ ಕಾರ್ಡ್ ರದ್ದು ಪ್ರಕ್ರಿಯೆ ಪ್ರಾರಂಭ..?

ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಸುಳ್ಳು ದಾಖಲಾತಿಗಳನ್ನು ನೀಡಿ ತುಂಬಾ ಜನರು ನಕಲಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಹಾಗೂ ಸರಕಾರದ ಹಲವಾರು ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಇದರಿಂದ ಅರ್ಹತೆ ಹೊಂದಿದ ರೇಷನ್ ಕಾರ್ಡ್ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು ಅರ್ಹತೆ ಇಲ್ಲದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಬೇಕು ಎಂದು ಕೂಗು ಮೊದಲಿಂದಲೂ ಕೇಳಿ ಬರುತ್ತಿತ್ತು.! ಇದೀಗ ರಾಜ್ಯ ಸರ್ಕಾರ ಅನರ್ಹ ರೇಷನ್ ಕಾರ್ಡ್ ಗಳ ರದ್ದತಿಗೆ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ..

Ration Card Cancelled
Ration Card Cancelled

 

ಹೌದು ಸ್ನೇಹಿತರೆ ವಿಧಾನ ಪರಿಷತ್ತಿನಲ್ಲಿ ಎಂ ನಾಗರಾಜ್ ಅವರು ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರಿಗೆ ಪ್ರಶ್ನೆ ಮಾಡಿದ್ದರು.!

ಇದಕ್ಕೆ ಸಂಬಂಧಿಸಿದಂತೆ ಕೆಎಚ್ ಮುನಿಯಪ್ಪನವರು ಉತ್ತರಿಸುವ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 12.5 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳು ನಕಲಿ ದಾಖಲಾತಿಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಸಂಖ್ಯೆ ಮೂಡಿದೆ ಹಾಗಾಗಿ ಇವುಗಳನ್ನು ಪರಿಶೀಲನೆ ಮಾಡಿ ರೇಷನ್ ಕಾರ್ಡ್ ರದ್ದು ಮಾಡುವ ಕ್ರಮ ಕೈಗೊಳ್ಳುವುದಾಗಿ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ

10ನೇ ತರಗತಿ ಪಾಸಾದವರಿಗೆ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗ ಸಿಗುತ್ತೆ ತಕ್ಷಣ ಅಪ್ಲೈ ಮಾಡಿ ಇಲ್ಲಿದೆ ನೋಡಿ ವಿವರ

 

12.5 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳು ರದ್ದು..?

ಹೌದು ಸ್ನೇಹಿತರೆ ಕೆಎಚ್ ಮುನಿಯಪ್ಪನವರು ಸದಾನದಲ್ಲಿ ಮುಂದೆ ಉತ್ತರಿಸುತ್ತಾ ನಮ್ಮ ಕರ್ನಾಟಕ ರಾಜ್ಯವು ಭಾರತದಲ್ಲಿ ಸುಮಾರು 80% ಗಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ ಅಥವಾ ಬಿಪಿಎಲ್ ಕುಟುಂಬಗಳ ಹೊಂದಿದ ರಾಜ್ಯವಾಗಿದೆ ಆದರೆ ಇತರ ನಮ್ಮ ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ತಮಿಳುನಾಡು ಹಾಗೂ ಕೇರಳ ಮುಂತಾದ ರಾಜ್ಯಗಳು 50% ಗಿಂತ ಕಡಿಮೆ BPL ರೇಷನ್ ಕಾರ್ಡ್ ಹೊಂದಿದ ಕುಟುಂಬಗಳ ರಾಜ್ಯಗಳಾಗಿವೆ ಎಂದು ಉತ್ತರಿಸಿದರು

WhatsApp Group Join Now
Telegram Group Join Now       

ಮುಂದೆ ಉತ್ತರಿಸುತ್ತ ನಮ್ಮ ರಾಜ್ಯದಲ್ಲಿ ಸುಮಾರು 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದ 5,13,620 BPL ರೇಷನ್ ಕಾರ್ಡ್ ಹೊಂದಿದ ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.!

ಈ 12 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಇನ್ನು 6,16,196 ಬಿಪಿಎಲ್ ರೇಷನ್ ಕಾರ್ಡ್ ಗಳಲ್ಲಿ ekyc ಪೂರ್ಣಗೊಂಡಿಲ್ಲವೆಂದು ತಿಳಿಸಿದ್ದಾರೆ ಮತ್ತು ಶೀಘ್ರದಲ್ಲೇ ಈ ರೇಷನ್ ಕಾರ್ಡ್ ಗಳು ರದ್ದಾಗಲಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.!

ಇದರ ಜೊತೆಗೆ ಇದೀಗ ಆಹಾರ ಇಲಾಖೆ ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಂದ ಇಂಥ ಅನರ್ಹ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚುವ ಕಾರ್ಯ ಬರದಿಂದ ಸಾಗುತ್ತಿದೆ ಮತ್ತು ಈಗಾಗಲೇ 3,64,254 bpl ರೇಷನ್ ಕಾರ್ಡ್ ಗಳನ್ನು ಕಳೆದ ಆರು ತಿಂಗಳಿಂದ ಯಾವುದೇ ಪಡಿತರ ಪಡೆದಿಲ್ಲ ಹಾಗೂ 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ (annual income) ಆದಾಯ ಹೊಂದಿದ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ

 

ನಿಮ್ಮ ರೇಷನ್ ಕಾರ್ಡ್ ರದ್ದು (Ration Card Cancelled) ಆಗಬಾರದು ಅಂದರೆ ಈ ರೂಲ್ಸ್ ಪಾಲಿಸಿ..?

ರೇಷನ್ ಕಾರ್ಡ್ E-Kyc:- ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು, ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಕುಟುಂಬದ ಎಲ್ಲಾ ಸದಸ್ಯರ ekyc ಪೂರ್ಣಗೊಳಿಸಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ

ಪ್ರತಿ ತಿಂಗಳು ಪಡಿತರ ಪಡೆಯಿರಿ:- ಹೌದು ಸ್ನೇಹಿತರೆ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದು ನೀವು ಕಳೆದ ಆರು ತಿಂಗಳಿಂದ ಯಾವುದೇ ರೇಷನ್ ನ್ಯಾಯಬೆಲೆ ಅಂಗಡಿಯಿಂದ ಪಡೆದಿಲ್ಲವೆಂದರೆ ಅಂತ ರೇಷನ್ ಕಾರ್ಡ್ ಗಳು ರದ್ದು ಆಗುತ್ತವೆ. ಆದ್ದರಿಂದ ಆದಷ್ಟು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೆ ಒಮ್ಮೆಯಾದರೂ ಪಡಿತರ ಪಡೆದುಕೊಳ್ಳಲು ಪ್ರಯತ್ನ ಮಾಡಿ

ರೇಷನ್ ಕಾರ್ಡ್ ನಿಯಮಗಳನ್ನು ಪಾಲಿಸಿ:– ಹೌದು ಸ್ನೇಹಿತರೆ, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರುವ ಎಲ್ಲಾ ಅರ್ಹತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ

ಉದಾಹರಣೆ:- 

1) ಕುಟುಂಬದ ವಾರ್ಷಿಕ (annual income) ಆದಾಯ 1.20 ಲಕ್ಷ ರೂಪಾಯಿ ಒಳಗಡೆ ಇರಬೇಕು

2) ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು

3) ಕುಟುಂಬದಲ್ಲಿ ಯಾರು ಸರಕಾರಿ ನೌಕರಿ ಹೊಂದಿರಬಾರದು

4) 5 ಎಕರೆಗಿಂತ ಕಡಿಮೆ ಜಮೀನು ಹೊಂದಿರಬೇಕು

5) 100 ಚದರ್ ಮೀಟರ್ (flat) ಗಿಂತ ಕಡಿಮೆ ವಿಸ್ತೀರ್ಣದ ಪ್ಲಾಟ್ (Ration card) ಅಥವಾ ಜಾಗ ಹೊಂದಿರಬೇಕು

ನಾವು ಕೆಳಗಡೆ ಒಂದು ಫೋಟೋ ಹಾಕಿದ್ದೇವೆ ಅದರಲ್ಲಿ ಕಾಣುವಂತ ಎಲ್ಲಾ ನಿಯಮಗಳನ್ನು ಪಾಲಿಸಿ

Ration Card Cancelled
Ration Card Cancelled

 

ಸ್ನೇಹಿತರೆ ಇದೇ ರೀತಿ ನಿಮಗೆ ಹೊಸ ಮಾಹಿತಿಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದೆಯಾ

ಹಾಗಾದರೆ ತಕ್ಷಣ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

Leave a Reply

Your email address will not be published. Required fields are marked *