ಪದವಿ ಪಾಸಾದವರಿಗೆ ರೈಲ್ವೆ ಇಲಾಖೆ ಬಂಪರ್ ಉದ್ಯೋಗ ಅವಕಾಶ, 5,810 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ!
ನಮಸ್ಕಾರ ಗೆಳೆಯರೇ ಉದ್ಯೋಗ ಹುಡುಕುತ್ತಿದ್ದವರಿಗೆ ಇದೀಗ ರೈಲ್ವೆ ಇಲಾಖೆ ಭರ್ಜರಿ ಉದ್ಯೋಗಾವಕಾಶ ನೀಡುತ್ತಿದೆ, ಹೌದು ಗೆಳೆಯರೇ ರೈಲ್ವೆ ಇಲಾಖೆ ಇದೀಗ ಆರ್ ಆರ್ ಬಿ (RRB) ಅಧಿಕೃತ ವೆಬ್ಸೈಟ್ ಮೂಲಕ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದು ಈ ಅಧಿಸೂಚನೆ ಪ್ರಕಾರ ಸುಮಾರು 5,810 ಖಾಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ಆಸಕ್ತಿ ಇರುವವರು ಬೇಗ ಅರ್ಜಿ ಸಲ್ಲಿಕೆ ಮಾಡಬಹುದು
ರೈಲ್ವೆ ಇಲಾಖೆ ಹೊಸ ನೇಮಕಾತಿ 2025..?
ಹೌದು ಸ್ನೇಹಿತರೆ, ಭಾರತೀಯ ರೈಲ್ವೆ ಇಲಾಖೆ ಇದೀಗ ಸುಮಾರು 5,810 ಖಾಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಹಾಗಾಗಿ ಆಸಕ್ತಿ ಇರುವವರು rrbapply.gov.in ಜಾಲತಾಣಕ್ಕೆ ಭೇಟಿ ನೀಡಿ ಈ ಕಾಲಿ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ನಾವು ಅರ್ಜಿ ಸಲ್ಲಿಸಲು ಇರುವ ಅರ್ಹತೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗಿ ಹಾಗೂ ಇತರ ನೇಮಕಾತಿಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ

ರೈಲ್ವೆ ಇಲಾಖೆಯ ಖಾಲಿ ಹುದ್ದೆಗಳ ನೇಮಕಾತಿ ವಿವರ..?
ನೇಮಕಾತಿ ಸಂಸ್ಥೆ: ಭಾರತೀಯ ರೈಲ್ವೆ ಇಲಾಖೆ (RRB)
ಖಾಲಿ ಹುದ್ದೆಗಳ ಸಂಖ್ಯೆ: 5,818 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಅರ್ಹತೆ: ಪದವಿ
ಅರ್ಜಿ ಪ್ರಾರಂಭ ದಿನಾಂಕ: 21/10/2025
ಅರ್ಜಿ ಕೊನೆಯ ದಿನಾಂಕ: 20/11/2025 (ರಾತ್ರಿ 11:59 ಕ್ಕೆ)
ಅಧಿಕೃತ ವೆಬ್ಸೈಟ್: https://www.rrbapply.gov.in/
ಖಾಲಿ ಹುದ್ದೆಗಳ ವಿವರ:
1) ಸ್ಟೇಷನ್ ಮಾಸ್ಟರ್ ಹುದ್ದೆಗಳು
2) ಚೀಪ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್
3) ಟ್ರಾಫಿಕ್ ಅಸಿಸ್ಟೆಂಟ್
4) ಗೂಡ್ಸ್ ಟ್ರೈನ್ ಮ್ಯಾನೇಜರ್
5) ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್
6) ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್
7) ಇತರೆ ವಿವಿಧ ಹುದ್ದೆಗಳು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ: ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 5810 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಹುದ್ದೆಗಳ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾದರೆ ಸಾಕು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ವಯೋಮಿತಿ ಎಷ್ಟು: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಈ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಜನವರಿ 1 2026ರಂತೆ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ ವಯೋಮಿತಿ 33 ವರ್ಷ ನಿಗದಿ ಮಾಡಲಾಗಿದೆ ಇದರ ಜೊತೆಗೆ ಸರ್ಕಾರಿ ಮೀಸಲಾತಿ ನಿಯಮಗಳ ಅನುಸಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಮತ್ತು ಮಾಜಿ ಸೈನಿಕರು ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಸಂಬಳ ಎಷ್ಟು: ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ಕನಿಷ್ಠ ₹25,500 ರಿಂದ 35,400 ವರೆಗೆ ಸಂಬಳ ನೀಡಲಾಗುತ್ತದೆ ಇದರ ಜೊತೆಗೆ ಸರಕಾರಿ ಯೋಜನೆಗಳ ಪಿಂಚಣಿ ಹಾಗೂ ಭತ್ಯೆ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಈ 5,810 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮೊದಲು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೆಳಗಡೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ದಿನಾಂಕ 20 ನವೆಂಬರ್ 2025ರ ಒಳಗಡೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಇತರೆ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ವಿವಿಧ ಸ್ಕಾಲರ್ಶಿಪ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು
ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು