“RRC Eastern Railway Apprentices Recruitment 2025” ನಮಸ್ಕಾರ ಸ್ನೇಹಿತರೆ ಪೂರ್ವ (Railway) ರೈಲ್ವೆ ಸಂಸ್ಥೆ ಇದೀಗ ತನ್ನ ಇಲಾಖೆಯಲ್ಲಿ (Jobs vacancy) ಖಾಲಿ ಇರುವ 3115 ಖಾಲಿ ಹುದ್ದೆಗಳಿಗೆ ಅರ್ಜಿ (Apply online) ಆಹ್ವಾನ ಮಾಡಲಾಗಿದೆ.! ಆಸಕ್ತಿ ಇರುವವರು ಬೇಗ ಅರ್ಜಿ ಸಲ್ಲಿಕೆ ಮಾಡಿ..
ಹೌದು ಸ್ನೇಹಿತರೆ ಪೂರ್ವ ರೈಲ್ವೆ ಇಲಾಖೆ ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತೆ 3115 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಹಾಗಾಗಿ ಈ ಹುದ್ದೆಗಳಿಗೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಕೆ ಮಾಡಬಹುದು..! ನಾವು ಈ ಲೇಖನ ಮೂಲಕ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ
ಪೂರ್ವ ರೈಲ್ವೆ ಇಲಾಖೆ ನೇಮಕಾತಿ 2025..?
ಸ್ನೇಹಿತರೆ ಹತ್ತನೇ ತರಗತಿ ಪಾಸಾದಂತವರಿಗೆ ಇದೀಗ ಸಿಹಿ ಸುದ್ದಿ ಏಕೆಂದರೆ ಯಾವುದೇ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ಈ 3115 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುವವರು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಹಾಗಾಗಿ ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ ತಕ್ಷಣ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು

ಅದು ಸ್ನೇಹಿತರ ಪೂರ್ವ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ ಅಪ್ರಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಆಸಕ್ತಿ ಇರುವವರು ದಿನಾಂಕ ಆಗಸ್ಟ್ 14 ರಿಂದ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ ಹಾಗೂ ಅರ್ಜಿ ಸಲ್ಲಿಸಲು 13 ಸೆಪ್ಟೆಂಬರ್ 2025 ರ ಒಳಗಡೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ..
ಪೂರ್ವ ರೈಲ್ವೆ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿ ವಿವರ..?
ನೇಮಕಾತಿ ಸಂಸ್ಥೆ:- ಪೂರ್ವ ರೈಲ್ವೆ ಇಲಾಖೆ (RRC)
ಖಾಲಿ ಹುದ್ದೆಗಳ ಸಂಖ್ಯೆ:- 3,115 ಹುದ್ದೆಗಳು
ಹುದ್ದೆಗಳ ಹೆಸರು:- ವಿವಿಧ ಅಪ್ರೆಂಟಿಸ್ ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅರ್ಜಿ ಪ್ರಾರಂಭ ದಿನಾಂಕ:- 14 ಆಗಸ್ಟ್ 2025
ಅರ್ಜಿ ಕೊನೆಯ ದಿನಾಂಕ:- 13 ಸೆಪ್ಟೆಂಬರ್ 2025
ವಯೋಮಿತಿ:- 15-24 ವರ್ಷ
ಸಂಬಳ:- ₹18,000/- ರಿಂದ ₹35,000/-
ಪೂರ್ವ ರೈಲ್ವೆ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ವಿದ್ಯಾರ್ಹತೆ:- ಸ್ನೇಹಿತರ ಪೂರ್ವ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಅರ್ಜಿದಾರರು ಕನಿಷ್ಠ 50% ಅಂಕದೊಂದಿಗೆ ಹತ್ತನೇ ತರಗತಿ ಪಾಸ್ ಆಗಿರಬೇಕು ಅಥವಾ 10+2 ವರ್ಷದೊಳಗಿನ ಪರೀಕ್ಷೆಯ ವ್ಯವಸ್ಥೆಯಲ್ಲಿ ಉತ್ತೀರ್ಣರಾಗಿರಬೇಕು
ವಯೋಮಿತಿ ಎಷ್ಟು:- ಪೂರ್ವ ರೈಲ್ವೆ ಇಲಾಖೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 15 ವರ್ಷ ಸೆಪ್ಟೆಂಬರ್ 13 2025 ರ ಒಳಗಡೆ ಪೂರೈಸಿರಬೇಕು ಹಾಗೂ ಗರಿಷ್ಠ 24 ವರ್ಷ ವಯೋಮಿತಿ ನಿಗದಿ ಮಾಡಲಾಗಿದ್ದು ಸರಕಾರದ ಮೀಸಲಾತಿ ನಿಯಮಗಳ ಅನುಸಾರವಾಗಿ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿಕೊಳ್ಳಿ
ಅರ್ಜಿ ಶುಲ್ಕ:- SC/ST/PWBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಸಲ್ಲಿಕ ಇರುವುದಿಲ್ಲ ಹಾಗೂ ಇತರ ಸಾಮಾನ್ಯ ಅಭ್ಯರ್ಥಿಗಳಿಗೆ ₹100/- ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಮತ್ತು ಅರ್ಜಿ ಶುಲ್ಕ ಪಾವತಿಗೆ ಆನ್ಲೈನ್ ಮೂಲಕ ಅವಕಾಶ ನೀಡಲಾಗಿದೆ
ಯಾವುದೇ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ಆಯ್ಕೆ..?
ಪೂರ್ವ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 3115 ಅಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ಅಂದರೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯಾವುದೇ ಪರೀಕ್ಷೆ ನಡೆಸುವುದಿಲ್ಲ ಬದಲಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ನಂತರ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮತ್ತು ಇತರ ವಿಧಾನಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಸರಿಸಲಾಗುತ್ತದೆ
ಪೂರ್ವ ರೈಲ್ವೆ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮೊದಲು ಪೂರ್ವ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಸರಿಯಾಗಿ ಓದಿಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರ ಇದೇ ರೀತಿ ಸರ್ಕಾರಿ ಉದ್ಯೋಗ ಹಾಗೂ ಸರಕಾರಿ ಯೋಜನೆಗಳು ಮತ್ತು ಇತರ ಮಾಹಿತಿ ಪಡೆಯಲು
ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಭೇಟಿ ನೀಡಬಹುದು