RTO Recruitment 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೋಟಾರ್ ವಾಹನ ನಿರೀಕ್ಷಕರು ಹಾಗೂ ಇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು.! ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.! ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಇತರ ವಿವರಗಳನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಈ ಒಂದು ಲೇಖನೆಯನ್ನು ಕೊನೆಯವರೆಗೂ ಓದಿ
ಗೃಹಲಕ್ಷ್ಮಿ 12, 13 ಮತ್ತು 14ನೇ ಕಂತಿನ ಹಣ ಈ ಜಿಲ್ಲೆಯಲ್ಲಿರುವ ಮಹಿಳೆಯರಿಗೆ ಒಟ್ಟಿಗೆ 6,000 ಜಮಾ ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳುವ ವಿವಿಧ ಖಾಲಿ ಹುದ್ದೆಗಳ ಕುರಿತು ಮಾಹಿತಿ ಹಾಗೂ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಹೊಸ ನೇಮಕಾತಿ (RTO Recruitment 2024)..?
ಹೌದು ಸ್ನೇಹಿತರೆ, ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ ಮತ್ತು ಆಸಕ್ತಿ ಇರುವವರು 20 ನವೆಂಬರ್ 2024ರ ಒಳಗಡೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹಾಗಾಗಿ ಈ ಹುದ್ದೆಗಳಿಗೆ ಸಂಬಂಧಿಸಿದ ಇನ್ನೆಷ್ಟು ವಿವರವನ್ನು ಕೆಳಗಡೆ ನೀಡಲಾಗಿದೆ
ಹುದ್ದೆಗಳ ವಿವರ (RTO Recruitment 2024)..?
ನೇಮಕಾತಿ ಇಲಾಖೆ:- ಸಾರಿಗೆ ಇಲಾಖೆ ಕರ್ನಾಟಕ (KPSC)
ಒಟ್ಟು ಹುದ್ದೆಗಳ ಸಂಖ್ಯೆ:- 76
ಹುದ್ದೆಗಳ ಹೆಸರು:- ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 20/11/2024
ಅರ್ಜಿ ಸಲ್ಲಿಸಲು ಇರುವ ಇತರ ಅರ್ಹತೆಗಳು (RTO Recruitment 2024)..?
ಶೈಕ್ಷಣಿಕ ಅರ್ಹತೆ:- ಸ್ನೇಹಿತರೆ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು ಹಾಗೂ ಮೂರು ವರ್ಷ ಡಿಪ್ಲೋಮಾ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ ಅಥವಾ ಡಿಪ್ಲೋಮೋ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಇತರ ವಿದ್ಯಾರ್ಹತೆಗಳನ್ನು ಹೊಂದಿರಬೇಕು ಇದರ ಜೊತೆಗೆ ಲಘು ಮೋಟಾರ್ ವಾಹನ ಅಥವಾ ಮೋಟರ್ ಸೈಕಲ್ ವಾಹನ ಚಾಲನಾ ಪಾರವನಿಗೆ ಹೊಂದಿರಬೇಕು
ವಯೋಮಿತಿ:- ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಗರಿಷ್ಠ 35 ವರ್ಷದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಮೀಸಲಾತಿ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 40 ವರ್ಷ ಮತ್ತು ಪ್ರವರ್ಗ 2A,2B, & 3A, 3B ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ
ವೇತನ ಶ್ರೇಣಿ:- ಸ್ನೇಹಿತರೆ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹33,450/- ನಿಂದಾ 62,600 ವರೆಗೆ ವೇತನ ನೀಡಲಾಗುತ್ತದೆ
ಅರ್ಜಿ ಶುಲ್ಕ:- ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರಿಗೆ 600 ಹಾಗೂ ಪ್ರವರ್ಗ 2a,2b, 3a, 3b ವರ್ಗದ ಅಭ್ಯರ್ಥಿಗಳಿಗೆ ರೂ.300 ಮತ್ತು ಮಾಜಿ ಸೈನಿಕರಿಗೆ ರೂ. 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮತ್ತು ಅಂಗವಿಕಲರಿಗೆ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ ಈ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು
ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು & ಅರ್ಜಿ ಸಲ್ಲಿಸುವುದು ಹೇಗೆ (RTO Recruitment 2024)..?
ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20 ನವೆಂಬರ್ 2024 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಡೆ ಆಸಕ್ತಿ ಇರುವ ಅಭ್ಯರ್ಥಿಗಳು ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ ಆಗಿದೆ ಹಾಗಾಗಿ ಈ ಒಂದು ಲಿಂಕ್ ಬಳಸಿಕೊಂಡು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಹತ್ತಿರವಿರುವ ಆನ್ ಲೈನ್ ಸೆಂಟರ್ಗಳಿಗೆ ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ