Sheep Loan Scheme – ಕುರಿ ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರ ಕಡೆಯಿಂದ 50000 ಸಹಾಯಧನ & ಸಾಲ ಸೌಲಭ್ಯ

Sheep Loan Scheme – ಕುರಿ ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರ ಕಡೆಯಿಂದ 50000 ಸಹಾಯಧನ & ಸಾಲ ಸೌಲಭ್ಯ

ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವಂತಹ ಜನರಿಗೆ ಇದೀಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.! ಹೌದು ಸ್ನೇಹಿತರೆ ಕುರಿ ಮತ್ತು ಕೋಳಿ ಹಾಗೂ ಮೇಕೆ ಮುಂತಾದ ಪ್ರಾಣಿಗಳನ್ನು ಸಾಕಣೆ ಮಾಡಲು ರಾಜ್ಯ ಸರ್ಕಾರ ರೂ. 50,000 ಸಹಾಯಧನ ನೀಡುವುದರ ಜೊತೆಗೆ ಸಾಲ ಸೌಲಭ್ಯ ಒದಗಿಸಿಕೊಡುತ್ತಿದೆ ಹಾಗಾಗಿ ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

ಇಂದು ಚಿನ್ನದ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಇಳಿಕೆ.! ಇಂದು ನಿಮ್ಮ ಪ್ರದೇಶದಲ್ಲಿ ಎಷ್ಟು ಚಿನ್ನದ ಬೆಲೆ ಇದೆ ಎಂದು ಈ ರೀತಿ ತಿಳಿಯಲಿ

WhatsApp Group Join Now
Telegram Group Join Now       

 

ಕುರಿ ಮತ್ತು ಮೇಕೆ ಸಾಕಾಣಿಕೆಗೆ 50,000 ಸಹಾಯಧನ..?

ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಸ್ವಂತ ಉದ್ಯೋಗ ಮಾಡಲು ಬಯಸುವಂಥವರಿಗೆ ಹಾಗೂ ಕುರಿ ಮತ್ತು ಮೇಕೆ ಹಾಗೂ ಕೋಳಿ ಮುಂತಾದ ಪ್ರಾಣಿಗಳನ್ನು ಸಾಕಾಣಿಕೆ ಮಾಡಲು ಬಯಸುವಂಥ ಜನರಿಗೆ ಇದೀಗ ಕೃಷಿ ಪಶುಪಾಲನ ಇಲಾಖೆಯ ಯೋಜನೆ ಅಡಿಯಲ್ಲಿ ಶೇಕಡ 50ರಷ್ಟು ಸಬ್ಸಿಡಿ ನೀಡುತ್ತಿದೆ ಹಾಗೂ ಸಾಲು ಸೌಲಭ್ಯ ಒದಗಿಸುತ್ತಿದೆ

Sheep Loan Scheme
Sheep Loan Scheme

 

ಹೌದು ಸ್ನೇಹಿತರೆ ನಮ್ಮ ರಾಜ್ಯದ ಸಪಾಯಿ ಚರ್ಮಚಾರಿ ಸಮುದಾಯಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಹಾಗೂ ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿ ಮಾಡಲು ರಾಜ್ಯ ಸರಕಾರ ಇದೀಗ ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ

 

ಎಷ್ಟು ಸಾಲ ಸೌಲಭ್ಯ ಮತ್ತು ಸಬ್ಸಿಡಿ ಸಿಗುತ್ತೆ..?

ಈ ಒಂದು ಯೋಜನೆಯ ಮೂಲಕ ಕುರಿ ಮತ್ತು ಮೇಕೆ ಹಾಗೂ ಇತರ ಪ್ರಾಣಿಗಳ ಸಾಕಾಣಿಕೆಗಾಗಿ ರಾಜ್ಯ ಸರ್ಕಾರ ಗರಿಷ್ಠ 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ನೀಡುತ್ತದೆ ಹಾಗೂ 50,000 ವರೆಗೆ ಉಚಿತವಾಗಿ ಸಹಾಯಧನ ಈ ಒಂದು ಯೋಜನೆಯ ಮೂಲಕ ಜನರಿಗೆ ನೀಡುತ್ತಿದೆ

  • ₹50,000 ರೂಪಾಯಿ ಉಚಿತ ಸಹಾಯಧನ
  • ಶೇಕಡ 4% ಬಡ್ಡಿ ದರದಲ್ಲಿ 50,000 ವರೆಗೆ ಸಾಲ ಸೌಲಭ್ಯ
  • ಕಡಿಮೆ ವೆಚ್ಚದಲ್ಲಿ ಅಧಿಕ ಲಾಭಗಳಿಸುವ ಮಾರ್ಗ
  • ಈ ಯೋಜನೆಯಿಂದ ಗ್ರಾಮೀಣ ಜನರಿಗೆ ಪ್ರಯೋಜನ

 

WhatsApp Group Join Now
Telegram Group Join Now       

ಯೋಜನೆಯ ಮುಖ್ಯ ಉದ್ದೇಶ..?

ಜನರಿಗೆ ಈ ಒಂದು ಯೋಜನೆಯ ಮೂಲಕ ಕುರಿ ಮತ್ತು ಮೇಕೆ ಹಾಗೂ ಹಸು ಮುಂತಾದ ಪ್ರಾಣಿಗಳನ್ನು ಸಾಕಾಣಿಕೆ ಮಾಡಿ ಕಡಿಮೆ ಆದಾಯದಲ್ಲಿ ಹೆಚ್ಚು ಲಾಭ ಗಳಿಸಲು ಈ ಒಂದು ಯೋಜನೆ ಜಾರಿಗೆ ತರಲಾಗಿದೆ.! ಈ ಯೋಜನೆ ಮೂಲಕ ಅರ್ಜಿದಾರರು ಹಾಲು, ಉಣ್ಣೆ, ಮಾಂಸ, ಗೊಬ್ಬರ, ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೂಲಕ ಆದಾಯ ಗಳಿಸಬಹುದಾಗಿದೆ ಹಾಗಾಗಿ ಸ್ವಂತ ಉದ್ಯೋಗ ಮಾಡಲು ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಈ ಯೋಜನೆ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ

 

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

ಕರ್ನಾಟಕ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಾಗೂ ವಿವಿಧ ನಿಗಮಗಳಿಂದ ಇದೀಗ ಕೆಲ  ಸಮುದಾಯದ ಜನರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಕೆಳಗಡೆ ನೀಡಿದ ಸಮುದಾಯಕ್ಕೆ ನೀವು ಸೇರಿದರೆ ಅರ್ಜಿ ಸಲ್ಲಿಕೆ ಮಾಡಬಹುದು

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರು
  • ಸೌರೋದಯ ಸಮುದಾಯದವರು
  • ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರು
  • ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದವರು
  • ಸಫಾಯಿ ಕರ್ಮಚಾರಿಗಳ ಸಮುದಾಯದವರು
  • ಲಂಬಾಣಿ, ಬೋವಿ, ಆದಿ ಜಾಂಬವ ಸಮುದಾಯದವರು

 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್
  • ಇತ್ತೀಚಿನ ಎರಡು ಫೋಟೋಸ್
  • ಮೊಬೈಲ್ ನಂಬರ್
  • ಇತರೆ ಅಗತ್ಯ ದಾಖಲಾತಿಗಳು

 

ಅರ್ಜಿ ಸಲ್ಲಿಸುವುದು ಹೇಗೆ (How To Apply Online Sheep Loan Scheme).?

ಸ್ನೇಹಿತರೆ ನೀವು ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಸೇವಾ ಸಿಂಧು ಪೋರ್ಟಲ್ ಮೂಲಕ ಈ ಒಂದು ಯೋಜನೆಗೆ ಅಪ್ಲೈ ಮಾಡಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30/09/2025

ಸಹಾಯವಾಣಿ:- 948230040

 

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ..?

ನೀವು ಈ ಒಂದು ಯೋಜನೆಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಕುರಿ ಮತ್ತು ಮೇಕೆ ಹಾಗೂ ಕೋಳಿ ಮುಂತಾದ ಪ್ರಾಣಿಗಳ ಸಾಕಾಣಿಕೆಗಾಗಿ ಸಾಲ ಸೌಲಭ್ಯ ಪಡೆಯಬಹುದು

 

Leave a Comment