SSP Scholarship Aadhar Card Link – SSP ಸ್ಕಾಲರ್ಶಿಪ್ ಹಣ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ತಪ್ಪದೆ ಆಧಾರ್ ಸೀಡಿಂಗ್ ಕಡ್ಡಾಯ..! ಮೊಬೈಲ್ ಮೂಲಕ ಚೆಕ್ ಮಾಡಿ
ನಮಸ್ಕಾರ ಗೆಳೆಯರೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಹಣ ಪಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಹೊಸ ಅಪ್ಡೇಟ್ ಬಂದಿದೆ.! ಹೌದು ಗೆಳೆಯರೇ ಸರಕಾರದ ಯಾವುದೇ ಸ್ಕಾಲರ್ಶಿಪ್ ಯೋಜನೆಯ ಮೂಲಕ ಹಣ ಪಡೆಯಬೇಕಾದರೆ ತಪ್ಪದೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಆಧಾರ್ ಕಾರ್ಡ್ ಸೀಡಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಆಧಾರ್ ಕಾರ್ಡ್ (SSP Scholarship Aadhar Card Link) ಸೀಡಿಂಗ್ ಎಂದರೆ ಏನು..?
ಗೆಳೆಯರೇ ಆಧಾರ್ ಕಾರ್ಡ್ ಸೀಡಿಂಗ್ ಎಂದರೆ ನೀವು ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಹಣ ಪಡೆದುಕೊಳ್ಳಲು ಹಾಗೂ ಹಣ ವರ್ಗಾವಣೆ ಮಾಡಲು ನೇರವಾಗಿ DBT ಮೂಲಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ಹಾಗೂ ಇತರ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಬ್ಯಾಂಕ್ ಖಾತೆಗೆ ಮಾಡಿಸಬೇಕಾಗುತ್ತದೆ ಇದರ ಜೊತೆಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದ NPCI ಮ್ಯಾಪಿಂಗ್ ಮಾಡಿಸಬೇಕು

ಹೌದು ಸ್ನೇಹಿತರೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಮೇಲೆ ಡೈರೆಕ್ಟ್ ಹಣ ವರ್ಗಾವಣೆ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಅಥವಾ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಹಾಗಾಗಿ ಬೇಗ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆ ಎಂದು ಪರಿಶೀಲನೆ ಮಾಡಿಕೊಳ್ಳಿ
ಸರ್ಕಾರದ ಹೊಸ ಅಪ್ಡೇಟ್ (SSP Scholarship Aadhar Card Link new update)..?
ಹೌದು ಸ್ನೇಹಿತರೆ ರಾಜ್ಯ ಸರ್ಕಾರದ ಯಾವುದೇ ಸ್ಕಾಲರ್ಶಿಪ್ ಯೋಜನೆಯ ಅರ್ಜಿ ಸಲ್ಲಿಕೆಗೆ ಒಂದೇ ಒಂದು ಆನ್ಲೈನ್ ಪ್ಲಾಟ್ ಫಾರ್ಮ್ ಯಾವುದು ಎಂದರೆ ಅದು ಎಸ್ ಎಸ್ ಪಿ ಆನ್ಲೈನ್ ಪೋರ್ಟಲ್ ಆಗಿದೆ.! ಈ ಆನ್ಲೈನ್ ಪೋರ್ಟಲ್ ಮೂಲಕ ವಿವಿಧ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹೊಸ ಅಪ್ಡೇಟ್ ನೀಡಿದೆ
ಹೌದು ಸ್ನೇಹಿತರೆ ರಾಜ್ಯದ ವಿವಿಧ ಇಲಾಖೆ ನೀಡಿರುವ ಅಂಕಿ ಅಂಶಗಳ ಮಾಹಿತಿಯ ಪ್ರಕಾರ ಇನ್ನು ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಇದರಿಂದ ಸಾಕಷ್ಟು ವಿದ್ಯಾರ್ಥಿಗಳ ಹಣ ವರ್ಗಾವಣೆ ವಿಳಂಬವಾಗುತ್ತಿದೆ ಎಂದು ವಿವಿಧ ಇಲಾಖೆಗಳು ತಾಲೂಕು ಮಟ್ಟದ ಆಧಾರ್ ಕಾರ್ಡ್ ಸೀಡಿಂಗ್ ಅಭಿಯಾನವನ್ನು ಆಯೋಜಿಸಿದೆ
ಹಾಗಾಗಿ ವಿವಿಧ ಇಲಾಖೆಗಳು ಇದೀಗ ವಿದ್ಯಾರ್ಥಿಗಳಿಗೆ ತಪ್ಪದೇ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದು ಹೊಸ ಮಾಹಿತಿ ನೀಡಿದೆ ಹಾಗಾಗಿ ನಿಮಗೆ ಇನ್ನು ಮುಂದೆ ಯಾವುದೇ ಸ್ಕಾಲರ್ಶಿಪ್ ಯೋಜನೆಯ ಹಣ ಬರಬೇಕಾದರೆ ಹಾಗೂ ಬಾಕಿ ಇರುವಂತ ಸ್ಕಾಲರ್ಶಿಪ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ತಪ್ಪದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಿ
ಆಧಾರ್ ಕಾರ್ಡ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ (how to check bank account Aadhar Card link status)..?
ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಅಥವಾ ಇಲ್ಲ ಎಂಬ ಮಾಹಿತಿಯನ್ನು ತುಂಬಾ ಸುಲಭವಾಗಿ ಮೊಬೈಲ್ ಮೂಲಕ ಚೆಕ್ ಮಾಡಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ಈಗ ತಿಳಿಯೋಣ
ಮೊದಲು ವಿದ್ಯಾರ್ಥಿಗಳು ನಾವು ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅಥವಾ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು
ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತದೆ
- ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಹಾಗೂ ಕೆಳಗಡೆ ಕ್ಯಾಪ್ಚರ್ ಕೋಡ್ ಎಂಟರ್ ಮಾಡಿ ನಿಮ್ಮ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಿ
- ನಂತರ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬಂದ ನಂತರ ಅದನ್ನು ಎಂಟರ್ ಮಾಡಿ ಆಧಾರ್ ಕಾರ್ಡ್ (UIDAI) ವೆಬ್ಸೈಟ್ನಲ್ಲಿ ಲಾಗಿನ್ ಆಗಿ
- ನಂತರ ಸ್ವಲ್ಪ ಕೆಳಗಡೆ ಸ್ಕೂಲ್ ಮಾಡಿದ ನಂತರ ಅಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (Bank seeding status) ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಅಥವಾ ಸೀಡಿಂಗ್ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು
ವಿದ್ಯಾರ್ಥಿಗಳು ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು
ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಪ್ ಚಾನೆಲ್ಗಳಿಗೆ ಸೇರಿಕೊಳ್ಳಬಹುದು
