PM Kisan 21Th installment – ಪಿಎಂ ಕಿಸಾನ್ 21ನೇ ಕಂತಿನ ಹಣ ಯಾವಾಗ ಬಿಡುಗಡೆ! ಇಲ್ಲಿದೆ ಮಾಹಿತಿ
ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣಕ್ಕಾಗಿ ತುಂಬಾ ರೈತರು ಕಾತರದಿಂದ ಕಾಯುತ್ತಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಮಾಹಿತಿ ತಿಳಿದು ಬಂದಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಹಣ ಪಡೆದುಕೊಳ್ಳಲು ರೈತರ ಮಾಡಬೇಕಾದ ಕೆಲಸ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
ಪಿಎಂ ಕಿಸಾನ್ ಯೋಜನೆ ಅಂದರೆ ಏನು..?
ಸ್ನೇಹಿತರ ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು 2019 ರಲ್ಲಿ ಜಾರಿಗೆ ತರಲಾಯಿತು. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯ ಮೂಲಕ ರೈತರಿಗೆ ವರ್ಷಕ್ಕೆ ರೂ.6000 ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2000 ಹಣವನ್ನು ವರ್ಗಾವಣೆ ಮಾಡುತ್ತಾ ಬಂದಿದೆ.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಮೂಲಕ ಇಲ್ಲಿವರೆಗೂ ರೈತರು ಬರೋಬ್ಬರಿ 20 ಕಂತು ಅಂದರೆ ಸರಿ ಸುಮಾರು ರೂ.40,000 ಪಡೆದುಕೊಂಡಿದ್ದರೆ ಎಂದು ಹೇಳಬಹುದು ಮತ್ತು ಇದೀಗ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ
ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಈ ರಾಜ್ಯದಲ್ಲಿ ಬಿಡುಗಡೆ..?
ಹೌದು ಸ್ನೇಹಿತರೆ ಇದೆ ಮೊದಲ ಬಾರಿಗೆ ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆಯ ಕೆಲ ರಾಜ್ಯಗಳಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಕಂತಿನ ಒಂದೇ ದಿನ ಇಡೀ ಭಾರತ ದೇಶದ ಎಲ್ಲ ರೈತರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ ಈ ನೇಮವನ್ನು ಕೇಂದ್ರ ಸರ್ಕಾರ ಇದೆ ಮೊದಲ ಬಾರಿಗೆ ಬ್ರೇಕ್ ಮಾಡಿದೆ ಎಂದು ಹೇಳಬಹುದು.
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಮತ್ತು ಈಶಾನ್ಯ ಕೆಲ ರಾಜ್ಯದ ರೈತರ ಖಾತೆಗೆ 21ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೌದು ಗೆಳೆಯರೇ ಇದಕ್ಕಾಗಿ ಕೇಂದ್ರ ಸರ್ಕಾರ 171 ಕೋಟಿ ರೂಪಾಯಿ ಮೊತ್ತದ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ ಹಾಗೂ ಇದರಿಂದ ಸುಮಾರು 8.55 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ
ನಮ್ಮ ಕರ್ನಾಟಕದ ರೈತರಿಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಯಾವಾಗ ಬಿಡುಗಡೆ..?
ಹೌದು ಗೆಳೆಯರೇ ಈಗಾಗಲೇ ಕೆಲ ರಾಜ್ಯದ ರೈತರು 21ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಹಾಗೂ ಇನ್ನೂ ನಮ್ಮ ಭಾರತ ದೇಶದ ಹಲವು ರಾಜ್ಯದ ರೈತರು 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಅಧಿಕೃತ ಮಾಹಿತಿ ಪ್ರಕಟ ಮಾಡಿಲ್ಲ, ಆದರೆ ಕೆಲವೊಂದು ಮಾಧ್ಯಮಗಳ ಮಾಹಿತಿಯ ಪ್ರಕಾರ ದೀಪಾವಳಿ ಹಬ್ಬಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ pm ಕಿಸಾನ್ ಯೋಜನೆಯ 21ನೇ ಕಂತಿನ ರೂ. 2000 ಹಣ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ
ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು, ರಿಂದ ಪ್ರತಿಯೊಬ್ಬ ರೈತರು ಹಣ ಪಡೆದುಕೊಳ್ಳಲು ಕಡ್ಡಾಯವಾಗಿ ಕೆಳಗಡೆ ತಿಳಿಸಿದ ಎಲ್ಲಾ ನಿಯಮಗಳನ್ನು ಅಥವಾ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ ಅಂದರೆ ಮಾತ್ರ ಈ 21ನೇ ಕಂತಿನ ರೈತರ ಖಾತೆಗೆ ಜಮಾ ಆಗುತ್ತದೆ
ಪಿಎಂ ಕಿಸಾನ್ 21ನೇ ಕಂತಿನ ಹಣ ಪಡೆಯಲು ತಪ್ಪದೆ ಈ ರೂಲ್ಸ್ ಪಾಲಿಸಿ..?
ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಪಡೆದುಕೊಂಡ ರೈತರು ಏನು ಮಾಡುವಂತ ಅವಶ್ಯಕತೆ ಇಲ್ಲ ಆದರೆ ಯಾರಿಗೆ 20ನೇ ಕಂತಿನ ಹಣ ಹಾಗೂ 19ನೇ ಕಂತಿನ ಹಣ ಮತ್ತು ಇತರ ಯಾವುದೇ ಕಂತಿನ ಹಣ ಬಾಕಿ ಇದ್ದರೆ ಕಡ್ಡಾಯವಾಗಿ ಕೆಳಗಡೆ ನೀಡಿದ ಎಲ್ಲಾ ನಿಯಮಗಳನ್ನು ಅಥವಾ ರೂಲ್ಸ್ ಗಳನ್ನು ಪಾಲಿಸಬೇಕು
PM ಕಿಸಾನ್ E-KYC ಪ್ರಕ್ರಿಯೆ ಪೂರ್ಣಗೊಳಿಸಿ:- ಹೌದು ಗೆಳೆಯರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಪಿಎಂ ಕಿಸಾನ್ ಯೋಜನೆ ಅರ್ಜಿಗೆ ekyc ಪ್ರಕ್ರಿಯೆ ಪೂರ್ಣಗೊಳಿಸಬೇಕು ಅಂದರೆ ಮಾತ್ರ 21ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗುತ್ತದೆ
ಎಲ್ಲ ದಾಖಲಾತಿಗಳು ಸರಿಯಾಗಿರಬೇಕು: ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರ ಹೆಸರು ಹಾಗೂ ಜಮೀನಿನ ದಾಖಲಾತಿಯಲ್ಲಿ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಹಾಗೂ ಬ್ಯಾಂಕ್ ಖಾತೆಯ ಹೆಸರು ಸರಿಯಾಗಿ ಇರಬೇಕು ಅಂದರೆ ಮಾತ್ರ ಪಿಎಂ ಕಿಸಾನ್ 21ನೇ ಕಂತಿನ ಹಣ ಜಮಾ ಆಗುತ್ತದೆ
ಬ್ಯಾಂಕ್ ಖಾತೆ ಸರಿಪಡಿಸಿ: ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳು ಅಥವಾ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ekyc ಪ್ರಕ್ರಿಯ ಪೂರ್ಣಗೊಳಿಸಿರಬೇಕು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು ಮತ್ತು ಬ್ಯಾಂಕ್ ಖಾತೆಗೆ NPCI ಮಾಡಿಸುವುದು ಕಡ್ಡಾಯವಾಗಿದೆ ಹಾಗಾಗಿ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಸರಿಪಡಿಸಿಕೊಳ್ಳಿ
FID ಕ್ರಿಯೇಟ್ ಮಾಡಿಸಿ: ರೈತರು ಕಡ್ಡಾಯವಾಗಿ ತಮ್ಮ ಜಮೀನಿಗೆ ಪತ್ರಕ್ಕೆ ಅಥವಾ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ekyc ಪ್ರಕ್ರಿಯೆ ಪೂರ್ಣಗೊಳಿಸಬೇಕು ಇದರ ಜೊತೆಗೆ FID ಕ್ರಿಯೇಟ್ ಮಾಡುವುದು ಕಡ್ಡಾಯವಾಗಿದೆ
ಸ್ನೇಹಿತರೆ ಮೇಲೆ ನಡೆದ ಎಲ್ಲ ಮಾಹಿತಿ ಸರಿಯಾಗಿದ್ದರೆ ನಿಮಗೆ 21ನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಹಾಗಾಗಿ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದರೆ ತಕ್ಷಣ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ
ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ
ISRO Recruitment 2025 – ISRO ಹೊಸ ನೇಮಕಾತಿ, 10Th, ITI, ಡಿಪ್ಲೋಮೋ ಪಾಸಾದವರಿಗೆ ಉದ್ಯೋಗ, ಬೇಗ ಅರ್ಜಿ ಸಲ್ಲಿಸಿ